Breaking News

ಬೆದರಿದ ಎತ್ತುಗಳು..ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು

Spread the love

ಬೆಂಗಳೂರು, ಸೆ.13- ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ವೇಳೆ ಎತ್ತುಗಳು ಬೆದರಿಕೊಂಡು ಓಡಾಡಿದ್ದರಿಂದ ಗಾಡಿಯಲ್ಲಿದ್ದ ಶಾಸಕರು ಕೆಳಗೆ ಬಿದ್ಧ ಘಟನೆ ನಡೆದಿದೆ. ಶಾಸಕ ವೆಂಕಟರಮಣಯ್ಯ ಮತ್ತು ಸಂಗಮೇಶ್ ಇದ್ದ ಎತ್ತಿನ ಗಾಡಿಯ ಎತ್ತುಗಳು ಹೆದರಿಕೊಂಡು ಅಡ್ಡಾದಿಡ್ಡಿ ಒಡಾಡಿದ್ದರಿಂದ ಆಯಾತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ.

ಇಂದು ಬೆಳಗ್ಗೆ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಗಳಲ್ಲಿ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಪ್ರತಿಭಟಿಸಲಾಯಿತು. ಎತ್ತಿನಗಾಡಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಗಾಡಿಗಳಲ್ಲಿ ಆಗಮಿಸಿದ್ದರು.

ಈ ವೇಳೆ ಸಾಕಷ್ಟು ಜನ ಜಂಗುಳಿಯೂ ನೆರೆದಿತ್ತು. ಗಾಡಿಗಳನ್ನು ಹೊತ್ತು ತರುತ್ತಿದ್ದು ಎತ್ತುಗಳು ವಿಧಾನಸೌಧದ ಗೇಟ್ ಬಳಿ ಬರುತ್ತಿದ್ದಂತೆ ಬೆದರಿ ಅಡ್ಡಾದಿಡ್ಡಿ ಓಡಾಡಿವೆ. ಇದಕ್ಕೂ ಮುನ್ನ ವಿಂಡ್ಸರ್ ಮ್ಯಾನರ್ ಬಳಿ ಎತ್ತಿಗಾಡಿ ಬರುತ್ತಿದ್ದಾಗ ಮೊದಲೇ ಬೆದರಿದ ಎತ್ತುಗಳು ಭಾರದಿಂದಾಗಿ ಗಾಡಿಯ ನಿಯಂತ್ರಣ ಕಳೆದುಕಂಡಿತು. ಕೂಡಲೇ ಅಕ್ಕಪಕ್ಕದಲ್ಲೇ ಇದ್ದ ಕಾರ್ಯಕರ್ತರು ಗಾಡಿಯನ್ನು ಹಿಡಿದರು.

ನಂತರ ಮತ್ತೆ ಚಾಲುಕ್ಯ ಸರ್ಕಲ್ ಬಳಿ ಜನಸಂಧಣಿ ಹಾಗೂ ಶಬ್ದದಿಂದ ಎತ್ತಗಳು ಗಾಬರಿಗೊಂಡು ದಿಕ್ಕು ತಪ್ಪಿತು. ಆಗಲೂ ಸಹ ಕಾರ್ಯಕರ್ತರು ಗಾಡಿಯನ್ನು ಸರಿಪಡಿಸಿ ಎತ್ತುಗಳು ಹೋಗಲು ಅನುವು ಮಾಡಕೊಟ್ಟರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ