Breaking News

ಹುಬ್ಬಳ್ಳಿ: ಪಬ್ ನಲ್ಲಿ ರೇಡಿಯೋ ಜಾಕಿಯ ಸ್ನೇಹಿತರಿಂದ ಗಲಾಟೆ

Spread the love

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ.

ಆರ್​ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್​ಗೆ ತೆರಳಿದ್ದರು. ಈ ವೇಳೆ ಪ್ಲೇಟ್​ನಲ್ಲಿ ಸಾಸ್​ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ.

ಗಲಾಟೆಯಲ್ಲಿ ಪ್ರವೀಣ್​​ ಸೇರಿ ಆರ್ ಜೆ ಮೇಘಾ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.

ಘಟನೆ ಸಮಯದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಒದಗಿಸುವಂತೆ ಪಬ್ ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ