Breaking News

ಜತೆ ಮಹಿಳಾ ಕಾನ್ಸ್​ಟೇಬಲ್​ ಅಶ್ಲೀಲತೆ, ಮಗನ ದುರ್ಬಳಕೆ: ವಿಡಿಯೋ ವೈರಲ್​ ಬೆನ್ನಲ್ಲೇ ಇಬ್ಬರಿಗೂ ಶಾಕ್​!

Spread the love

ಜೈಪುರ: ಮಹಿಳಾ ಕಾನ್ಸ್​ಟೇಬಲ್​ ಜತೆ ಸ್ವಿಮ್ಮಿಂಗ್​ಪೂಲ್​ನಲ್ಲಿ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರಾಜಸ್ಥಾನದ ಉಪ ಪೊಲೀಸ್​ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಅಶ್ಲೀಲ ವಿಡಿಯೋ ವೈರಲ್​ ಆದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಡಿಎಸ್​ಪಿ ಹಿರಾಲಾಲ್​ ಸೈನಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಸ್ವಿಮ್ಮಿಂಗ್​ ಪೂಲ್​ ಒಳಗಡೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಇದು ಅವರ ಖಾಸಗಿ ವಿಚಾರವಾದರೂ ಸೈನಿ ಇನ್ನೊಂದು ಘೋರ ಅಪರಾಧವನ್ನು ಎಸಗಿದ್ದಾರೆ. ಮಹಿಳಾ ಸಿಬ್ಬಂದಿಯ ಮಗನ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಇಬ್ಬರು ಅಮಾನತು ಮಾಡಲಾಗಿದೆ.

ಘಟನೆ ಸಂಬಂಧ ಮಹಿಳಾ ಕಾನ್ಸ್​ಟೇಬಲ್​ ಪತಿಯು ದೂರು ನೀಡಿದ್ದಾನೆ. ವಿಡಿಯೋ ಕುರಿತು ಉತ್ತರಿಸಲು ನಿರಾಕರಿಸಿರುವ ಡಿಎಸ್​ಪಿ ನನ್ನ ವಿರುದ್ಧದ ಆರೋಪ ಸುಳ್ಳು. ಅದು ನಕಲಿ ವಿಡಿಯೋ ಎಂದು ಸಮಜಾಯಿಷಿ ನೀಡಿದ್ದಾರೆ.

ನಿಜಕ್ಕೂ ಆಘಾತಕಾರಿಯೆಂದರೆ ಮಹಿಳಾ ಕಾನ್ಸ್​ಟೇಬಲ್ 6 ವರ್ಷದ​ ಮಗನು ಕೂಡ ವಿಡಿಯೋದಲ್ಲಿ ಅಸಹಜ ವರ್ತನೆ ತೋರಿದ್ದಾನೆ. ಆಗಸ್ಟ್​ 2ರಂದೇ ಮಹಿಳಾ ಕಾನ್ಸ್​ಟೇಬಲ್​ ಪತಿ, ನಗೌರ್​ ಜಿಲ್ಲೆಯ ಚಿತಾವಾ ಪೊಲೀಸ್​ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ದೂರಿನ ಪ್ರಕಾರ 2001ರಲ್ಲಿ ಇಬ್ಬರ ಮದುವೆ ಆಗಿದ್ದು, ಅದಕ್ಕೆ ಸಾಕ್ಷಿಯಾಗಿ 6 ವರ್ಷದ ಹಿಂದೆ ಗಂಡು ಮಗು ಜನಿಸಿದೆ. ಹೀಗಿರುವಾಗ 2008ರಲ್ಲಿ ಪತ್ನಿಗೆ ಕಾನ್ಸ್​ಟೇಬಲ್​ ಕೆಲಸ ಸಿಕ್ಕಿತು ಎಂದು ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದ ನಂತರ, ಇಬ್ಬರನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಕ್ಲಿಪ್‌ನ ದಿನಾಂಕ ಮತ್ತು ಸ್ಥಳವನ್ನು ನಿರ್ಧರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಾನ್ಸ್​ಟೇಬಲ್​ ಪತಿ ನೀಡಿದ ದೂರನ್ನು ಡಿಜಿಪಿ ಕಚೇರಿಗೆ ಕಳುಹಿಸಲಾಗಿದೆ. ತರುವಾಯ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಯಿತು. ನನ್ನ ಹೆಸರಿಗೆ ಕಳಂಕ ತರಲು ವಿಡಿಯೋ ಎಡಿಟ್​ ಮಾಡಲಾಗಿದೆ ಎಂದಿರುವ ಡಿಎಸ್​ಪಿ, ಕಾನ್ಸ್‌ಟೇಬಲ್ ಗಂಡನ ದೂರಿನ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದಾರೆ. 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ