Breaking News

ಅನುಶ್ರೀ ಡ್ರಗ್ ಸೇವನೆ ಮಾಡ್ತಿದ್ರು, ನಮ್ಮ ರೂಮಿಗೂ ತರುತ್ತಿದ್ರು? : ಕಿಶೋರ್ ಶೆಟ್ಟಿ ಆರೋಪ

Spread the love

ಮಂಗಳೂರು : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಡ್ರಗ್ ಸೇವನೆ ಮಾಡುತ್ತಿದ್ದರು, ನಮ್ಮ ಜೊತೆಯೇ ಡ್ರಗ್ ತೆಗೆದುಕೊಳ್ಳುತ್ತಿದ್ದರು ಎಂದು ಡ್ರಗ್ ಪ್ರಕರಣದ A 2 ಆರೋಪಿ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಸ್ತಾಗಬಾರದು ಎಂಬ ಕಾರಣಕ್ಕೆ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಕನ್ನಡದ ಖಾಸಗಿ ವಾಹಿನಿ ನಡೆಸುತ್ತಿದ್ದ ರಿಯಾಲಿಟಿ ಶೋ ವೇಳೆ ಡ್ರಗ್ಸ್ ಬಂದಿತ್ತು. ಆ ವೇಳೆ ಅನುಶ್ರಿ ಡ್ರಗ್ ಸೇವನೆ ಮಾಡಿದ್ದರು ಎಂದು ಕಿಶೋರ್ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದ ಕೊರಿಯೋಗ್ರಫಿ ಪ್ರಾಕ್ಟೀಸ್ ಮಾಡುವ ವೇಳೆ ಡ್ರಗ್ ಸೇವನೆ ಮಾಡುತ್ತಿದ್ದರು. ಡ್ಯಾನ್ಸ್ ಮಾಡಲು ಸುಸ್ತು ಆಗಬಾರದು ಎಂಬ ಕಾರಣಕ್ಕೆ ಡ್ರಗ್ ಸೇವನೆ ಮಾಡುತ್ತಿದ್ದರು ಎಂದು ಕಿಶೋರ್ ಹೇಳಿಕೆ ನೀಡಿದ್ದಾರೆ.

ಡ್ರಗ್ ಪ್ರಕರಣದ A1 ಆರೋಪಿ ತರುಣ್, A2 ಆರೋಪಿ ಕಿಶೋರ್ ಶೆಟ್ಟಿ ಮತ್ತು ಅನುಶ್ರೀ ಜೊತೆಯಲ್ಲೇ ಡ್ರಗ್ ಸೇವನೆ ಮಾಡುತ್ತಿದ್ದರು ಎಂಬುದನ್ನು ಸ್ವತಃ ಕಿಶೋರ್ ಶೆಟ್ಟಿಯೇ ಹೇಳಿಕೊಂಡಿದ್ದಾನೆ. ನಾವೆಲ್ಲ ಜೊತೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು. ಆ ವೇಳೆ ಅನುಶ್ರೀ ಡ್ರಗ್ಸ್ ತರುತ್ತಿದ್ರು ಎಂದು ಕಿಶೋರ್ ಹೇಳಿಕೊಂಡಿದ್ದಾನೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ