Breaking News

ಅಮೆರಿಕ ಸೇನೆ ಅಷ್ಘಾನಿಸ್ತಾನದಿಂದ ಹೊರಟಿರುವ ಬೆನ್ನಲ್ಲೇ,

Spread the love

ಲಂಡನ್‌(ಸೆ.01): ಅಮೆರಿಕ ಸೇನೆ ಅಷ್ಘಾನಿಸ್ತಾನದಿಂದ ಹೊರಟಿರುವ ಬೆನ್ನಲ್ಲೇ, ಇತ್ತ ತಾಲಿಬಾನ್‌ ಉಗ್ರರು ಈ ಹಿಂದೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಪರ ಕೆಲಸ ಮಾಡಿದ್ದಾರೆ ಎನ್ನಲಾದ ಆರೋಪಿಗಳ ಮನೆಗಳ ಮೇಲೆ ತಾವೇ ಶರಣಾಗಬೇಕು. ಇಲ್ಲದಿದ್ದರೆ ನಿಮಗೆ ಸಾವಿನ ಶಿಕ್ಷೆ ನೀಡಬೇಕಾಗುತ್ತದೆ ಎಂಬ ಭಯಾನಕವಾದ ‘ಬೆದರಿಕೆ ಪತ್ರ’ ಅಂಟಿಸುತ್ತಿದ್ದಾರೆ.

ಹಿಂದೆ ತಾಲಿಬಾನ್‌ ಉಗ್ರರನ್ನು ಶೋಧಿಸಲು ಅಮೆರಿಕದ ಪಡೆಗಳಿಗೆ ನೆರವು ನೀಡಿದ್ದಾರೆ ಎನ್ನಲಾದ ಆರೋಪಿಗಳನ್ನು ಉದ್ದೇಶಿಸಿ ಈ ಪತ್ರದಲ್ಲಿ ನೀವು ನ್ಯಾಟೋ ಪಡೆಗಳ ಗುಲಾಮರಾಗಿದ್ದು, ಅವರಿಗೆ ಸಹಕಾರ ನೀಡಬಾರದು ಎಂಬ ನಮ್ಮ ಎಚ್ಚರಿಕೆಯನ್ನು ಕಡೆಗಣಿಸುತ್ತಲೇ ಬಂದಿದ್ದೀರಿ. ಇದೀಗ ನೀವಾಗಿಯೇ ತಾಲಿಬಾನ್‌ ನ್ಯಾಯಾಲಯಕ್ಕೆ ಶರಣಾಗಿ ಎಂದಿದ್ದಾರೆ.

 

ಹೀಗಾಗದಿದ್ದರೆ ಈ ಪತ್ರವನ್ನು ಶರಿಯಾ ನ್ಯಾಯಾಲಯಕ್ಕೆ ರವಾನಿಸಲಾಗುತ್ತದೆ. ಅಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ನಿಮಗೆ ಮರಣದಂಡನೆ ವಿಧಿಸಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ