Breaking News

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ರಿಯಾಯಿತಿ ಆರೋಗ್ಯ ಕಾರ್ಡ್​ನ ಆಮಿಷ!

Spread the love

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿಯೇ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ದೇಶದ ವಿವಿಧ ಚುನಾವಣೆಗಳಲ್ಲಿ ಮತದಾರರ ಮನಗೆಲ್ಲಲು ಅನೇಕರು, ಸೀರೆ, ಕುಕ್ಕರ್, ಹಣದ ಆಮಿಷ ಒಡ್ಡಿದ ಸುದ್ದಿಗಳನ್ನು ಈಗಾಗಲೇ ಓದಿದ್ದೇವೆ. ಆದರೆ ಇದು ಅದಕ್ಕಿಂತ ವಿಭಿನ್ನ ಆಮಿಷ, ವಿಭಿನ್ನ ಸುದ್ದಿ. ಅಭ್ಯರ್ಥಿಯೋರ್ವರು ಮತದಾರರಿಗೆ ತಮ್ಮ ಆಸ್ಪತ್ರೆಯಲ್ಲಿ ಬಾರಿ ಡಿಸ್ಕೌಂಟ್ ಘೋಷಿಸಿ ಸುದ್ದಿಯಲ್ಲಿದ್ದಾರೆ. ಕಲಬುರಗಿ ನಗರದ ವಾರ್ಡ್ ನಂಬರ್ 42 ರ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲೀಮ್ ಪಟೇಲ್ ಎಂಬುವವರು ಮತದಾರರಿಗೆ ಹೆಲ್ತ್ ಕಾರ್ಡ್​ಗಳನ್ನು ನೀಡುತ್ತಿದ್ದಾರೆ. ಮಾಜಿ ಪಾಲಿಕೆ ಸದಸ್ಯರಾಗಿರುವ ಅಲೀಮ್ ಪಟೇಲ್, ಕಲಬುರಗಿ ನಗರದ ವಾರ್ಡ್ ನಂಬರ್ 42 ರಿಂದ ಈ ಬಾರಿ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಲ್ಲಿದ್ದ ಅಲೀಮ್ ಪಟೇಲ್ ಈ ಬಾರಿ ಜೆಡಿಎಸ್ ಗೆ ಜಿಗಿದು, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಪ್ರಚಾರಕ್ಕೆ ಹೋದಲ್ಲಿ ಹೆಲ್ತ್ ಕಾರ್ಡ್​ನಲ್ಲಿ ಮತದಾರರ ಹೆಸರು ಬರೆದು, ಪ್ರತಿಯೊಂದು ಕುಟುಂಬಕ್ಕೆ ಹೆಲ್ತ್ ಕಾರ್ಡ್​ಗಳನ್ನು ನೀಡುತ್ತಿದ್ದಾರೆ. ಈ ಕಾರ್ಡನ್ನು ತಗೆದುಕೊಂಡು ಹೋದರೆ ಆಸ್ಪತ್ರೆಯಲ್ಲಿ ನಿಮಗೆ ಡಿಸ್ಕೌಂಟ್ ಸಿಗುತ್ತದೆ ಎನ್ನುತ್ತ ತಮಗೆ ಮತ ಹಾಕುವಂತೆ ಅಭ್ಯರ್ಥಿ ಅಲೀಮ್ ಪಟೇಲ್ ಮತ್ತು ಅವರ ಬೆಂಬಲಿಗರು ಪ್ರಚಾರ ನಡೆಸಿದ್ದಾರೆ.

ವಾರ್ಡ್ ನಂಬರ್ 42 ರಲ್ಲಿ ಬರುವ ಮತದಾರರಿಗೆ ಹೆಲ್ತ್ ಕಾರ್ಡ್ ಹೆಸರಲ್ಲಿ ಹತ್ತಾರು ಸವಲತ್ತುಗಳನ್ನು ನೀಡಿದ್ದಾರೆ. ಅಲೀಂ ಪಟೇಲ್, ತಮ್ಮದೇ ಆದ ಕ್ಯೂಪಿ ಆಸ್ಪತ್ರೆ ಹೊಂದಿದ್ದು, ಆಸ್ಪತ್ರೆಯ ಹೆಸರಲ್ಲಿ ಹೆಲ್ತ್ ಕಾರ್ಡ್ ನೀಡಿದ್ದಾರೆ. ಹೆಲ್ತ್ ಕಾರ್ಡ್​ನಲ್ಲಿ ವೋಟ್ ಪಾರ್ ಜೆಡಿಎಸ್ – ಅಲೀಮ್ ಪಟೇಲ್ ಅಂತ ಹಾಕಿಸಿದ್ದಾರೆ. ಇನ್ನು ಮತದಾರರಿಗೆ ತಮ್ಮ ಆಸ್ಪತ್ರೆಯಲ್ಲಿ ಓಪಿಡಿಗೆ ಶೇಕಡಾ ಐವತ್ತರಷ್ಟು ರಿಯಾಯಿತಿ, ಐಪಿಡಿಗೆ ಶೇಕಡಾ ಇಪ್ಪತ್ತರಿಂದ ಮೂವತ್ತರಷ್ಟು ರಿಯಾಯತಿ, ಮಾತ್ರೆ ಖರೀದಿಸಿದರೆ, ಶೇಕಡಾ ಹತ್ತರಷ್ಟು ರಿಯಾಯತಿ, ಲ್ಯಾಬ್ ನಲ್ಲಿ ಕೂಡಾ ಶೇಕಡಾ ಹತ್ತರಷ್ಟು ರಿಯಾಯಿತಿ ನೀಡುವದಾಗಿ ತಿಳಿಸಲಾಗಿದೆ. ಇನ್ನು ಈ ಹೆಲ್ತ್ ಕಾರ್ಡ್ ಅವಧಿ ಐದು ವರ್ಷಗಳು ಅಂತ ಬರೆಯಲಾಗಿದೆ. ಇನ್ನು ಸ್ವತ ತಾವೇ ಈ ರೀತಿಯಾಗಿ ಕಾರ್ಡ್ ಗಳನ್ನು ನೀಡಿಲ್ಲ, ಬದಲಿಗೆ ಡಾ. ಮುಜುಬುದ್ದೀನ್ ಪಟೇಲ್ ಎಂಬವವರು ಈ ಆರೋಗ್ಯ ಕಾರ್ಡಿನ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ ಎನ್ನುತ್ತಾರೆ ಅಲೀಮ್ ಪಟೇಲ್.

 


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ