Breaking News
Home / ರಾಜಕೀಯ / ನೀರಜ್ ಈಗ ನ್ಯಾಷನಲ್ ಕ್ರಶ್! ಚಿನ್ನದ ಹುಡುಗ ನೀರಜ್​ ಚೋಪ್ರಾಗೆ ಮನಸೋತ ಕಿಯಾರಾ ಅಡ್ವಾಣಿ

ನೀರಜ್ ಈಗ ನ್ಯಾಷನಲ್ ಕ್ರಶ್! ಚಿನ್ನದ ಹುಡುಗ ನೀರಜ್​ ಚೋಪ್ರಾಗೆ ಮನಸೋತ ಕಿಯಾರಾ ಅಡ್ವಾಣಿ

Spread the love

ಭಾರತದ ಬಹುತೇಕ ಪ್ರತಿಯೊಬ್ಬ ಹುಡುಗಿರ ಕ್ರಶ್​ ಆಗಿದ್ದಾರೆ ನೀರಜ್‌. ಅದೇ ಸಮಯದಲ್ಲಿ, ಈಗ ಕಿಯಾರಾ ಅಡ್ವಾಣಿ ಕೂಡ ತನ್ನ ಕ್ರಶ್ ಯಾರೆಂಬುದನ್ನು ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ ಮನೆ ಮಾತಾಗಿರುವ ನೀರಜ್ ಚೋಪ್ರಾ ಅಭಿಮಾನಿಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸೇರಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ನೀರಜ್ ವರೆಗೂ ಅವರನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚಿನ್ನದ ಪದಕ ಗೆದ್ದಾಗಿನಿಂದ, ಅವರ ಗೆಲುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ನೀರಜ್‌ನಿಂದ ಪ್ರಭಾವಿತರಾದ ಕಿಯಾರಾ
ಭಾರತದ ಬಹುತೇಕ ಪ್ರತಿಯೊಬ್ಬ ಹುಡುಗಿರ ಕ್ರಶ್​ ಆಗಿದ್ದಾರೆ ನೀರಜ್‌. ಅದೇ ಸಮಯದಲ್ಲಿ, ಈಗ ಕಿಯಾರಾ ಅಡ್ವಾಣಿ ಕೂಡ ತನ್ನ ಕ್ರಶ್ ಯಾರೆಂಬುದನ್ನು ಹೇಳಿದ್ದಾರೆ. ವಾಸ್ತವವಾಗಿ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಚಿತ್ರ ಶೇರ್ ಶಾ ಈ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಕಿಯಾರಾ-ಸಿದ್ಧಾರ್ಥ್ ಜೋಡಿಯು ಚಿತ್ರದ ಪ್ರಚಾರಕ್ಕಾಗಿ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ.

ಸೈನಿಕನ ನಿಜ ಜೀವನಾಧರಿತ ಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಮನ್ನಣೆಯನ್ನು ಪಡೆಯುತ್ತಿದೆ. ಪ್ರಚಾರದ ಸಮಯದಲ್ಲಿ ಸಂದರ್ಶನವೊಂದರಲ್ಲಿ, ಕಿಯಾರಾಗೆ ನೀರಜ್ ಚೋಪ್ರಾ ಬಗ್ಗೆ ಕೇಳಿದಾಗ, ನಟಿ ನೀರಜ್ ಚೋಪ್ರಾ ಕೇವಲ ಈಗ ನ್ಯಾಷನಲ್ ಕ್ರಶ್ ಆಗಿಲ್ಲ. ಒಲಂಪಿಕ್ಸ್​ನಲ್ಲಿ ಗೆಲುವಿನ ನಂತರ ವರ್ಲ್ಡ್​ ಕ್ರಶ್ ಆಗಿದ್ದಾರೆ ಎಂಬ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಜೊತೆಗೆ ಅದೇ ಸಮಯದಲ್ಲಿ ಸಿದ್ಧಾರ್ಥ್ ಕೂಡ, ನೀರಜ್ ದೇಶದ ಹೆಸರನ್ನು ಬೆಳಗಿಸಿದ ನಿಜವಾದ ಶೇರ್ ಶಾ ಎಂದು ಹೇಳಿಕೆ ನೀಡಿದ್ದಾರೆ.

ಈ ನಟರು ನನ್ನ ಬಯೋಪಿಕ್ ಮಾಡಬೇಕು
2018 ರಲ್ಲಿ, ನೀರಜ್ ಚೋಪ್ರಾ ದೇಶಾದ್ಯಂತ ಹೆಚ್ಚು ಪ್ರಸಿದ್ಧಿ ಹೊಂದಿರದಿದ್ದಾಗ, ಅವರು ವೆಬ್ ಪೋರ್ಟಲ್‌ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಅವರು ತಮ್ಮ ಬಯೋಪಿಕ್ ಅನ್ನು ಬಾಲಿವುಡ್‌ನಲ್ಲಿ ಭವಿಷ್ಯದಲ್ಲಿ ನಿರ್ಮಿಸಿದರೆ, ಅದರಲ್ಲಿ ತಮ್ಮ ಪಾತ್ರವನ್ನು ಅಕ್ಷಯ್ ಕುಮಾರ್ ಅಥವಾ ರಣದೀಪ್ ಹೂಡಾ ಮಾಡಬೇಕು ಎಂದು ನಿರಜ್ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ