Breaking News

ವಾಹನ ಸವಾರರೇ ಎಚ್ಚರ! ಇನ್ಮುಂದೆ ಹೈವೇನಲ್ಲಿ ಸ್ಪೀಡ್​​ ಆಗಿ ಓಡಿಸಿದ್ರೆ ಬೀಳುತ್ತೇ ಭಾರೀ ದಂಡ

Spread the love

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಕ್ಯಾಮರಾಗಳ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಹೆದ್ದಾರಿಗಳಲ್ಲೂ ಸಾರಿಗೆ ಇಲಾಖೆ ಕ್ಯಾಮರಾ ಅಳವಡಿಕೆ ಅಗತ್ಯ ತಯಾರಿ ನಡೆಸಿಕೊಂಡಿದೆ. ಇನ್ಮುಂದೆ ಒಂದು ವೇಳೆ ಸವಾರರು ಅಗತ್ಯಕ್ಕಿಂತ ವೇಗವಾಗಿ ವಾಹನ ಚಲಾಯಿಸಿದರೆ ದಂಡ ತೆರಲೇಬೇಕಾಗುತ್ತದೆ.

ಹೌದು, ವಾಹನ ಸವಾರರು ಇನ್ಮುಂದೆ ಎಚ್ಚರಿಕೆಯಿಂದ ಇರಲೇಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್​​ ಆಗಿ ವಾಹನ ಓಡಿಸುವ ಮುನ್ನ ಎರಡು ಬಾರಿ ಯೋಚಿಸಬೇಕು. ಕೇಂದ್ರ ಸಾರಿಗೆ ಇಲಾಖೆ ಕಠಿಣ ರೂಲ್ಸ್ ಜಾರಿ ಮಾಡಲಿದ್ದು, ಚೂರು ಎಡವಿದರೂ ಭಾರೀ ಪ್ರಮಾಣದಲ್ಲಿ ದಂಡ ಬೀಳುತ್ತದೆ.

ಯಾವುದೇ ಕಾರಣಕ್ಕೂ ನಮ್ಮನ್ನು ಯಾರು ತಡೆಯೋದಿಲ್ಲ, ನೋಡೋದಿಲ್ಲ ಎಂದು ಬೇಕಾಬಿಟ್ಟಿ ವಾಹನ ಚಲಾಯಿಸೋಕೆ ಆಗುವುದಿಲ್ಲ. ಯಾರಾದರೂ ಒಂದು ವೇಳೆ ನಿಯಮ ಉಲ್ಲಂಘಿಸಿ ಸ್ಪೀಡ್​​ ಆಗಿ ವಾಹನ ಚಲಾಯಿಸಿದರೆ ಮುಂದಿನ ಟೋಲ್​​ನಲ್ಲೇ ಫೈನ್​​ ಕಟ್ಟಬೇಕಾಗುತ್ತದೆ. ನಿಮ್ಮ ಗಾಡಿ ಸಂಖ್ಯೆ ಮತ್ತು ಸ್ಪೀಡ್​​ ಬಗ್ಗೆ ಇಲಾಖೆಗೆ ಕೂಡಲೇ ಮಾಹಿತಿ ರವಾನೆಯಾಗುತ್ತದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ