Breaking News

ಮಾವಾ ತಯಾರಿಕೆ ಅಡ್ಡೆ ಮೇಲೆ ದಾಳಿ : ಮೂವರ ಬಂಧನ, 2.50 ಲಕ್ಷ ರೂ. ಮೌಲ್ಯದ ಸೊತ್ತು ವಶ

Spread the love

ವಿಜಯಪುರ : ರಾಜ್ಯದಲ್ಲಿ ನಿಷೇಧಿತವಾಗಿರುವ ತಂಬಾಕು ಉತ್ಪನ್ನವಾದ ಮಾವಾ ತಯಾರಿಕೆಯ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಮೂವರನ್ನು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯಪುರ ಗ್ರಾಮೀಣ ಸಿಪಿಐ ಎಸ್.ಬಿ.ಪಾಲಭಾವಿ ಅವರು ತಿಕೋಟ ಪಟ್ಟಣದಲ್ಲಿ ಅಲ್ಲಿನ ಎಸೈ ಎಸ್.ಕೆ.ಲಂಗೋಟೆ ಅವರೊಂದಿಗೆ ಪೆಟ್ರೋಲಿಂಗ್‍ನಲ್ಲಿ ತೊಡಗಿದ್ದಾಗ ಅಕ್ರಮವಾಗಿ ಗುಟ್ಕಾ ತಯಾರಿಸುವ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಆಧರಿಸಿ ಬಡಕಲ್ ಓಣಿ ಹಾಗೂ ಗೌಡರ ಓಣಿಗಳಲ್ಲಿ ಸ್ಥಳೀಯ ಠಾಣೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದಾಗ ಆರೋಪಿಗಳ ತಂಬಾಕು ಉತ್ಪನ್ನ ಸಹಿತ ಸಿಕ್ಕಿ ಬಿದ್ದಿದ್ದಾರೆ.

ಬಂಧಿತರನ್ನು ತಿಕೋಟ ಪಟ್ಟಣದ ಮದರಸಾಬ್ ಹಾಜಿಲಾಲ್ ಮದ್ದಿಮನಿ (48). ಅಬ್ದುಲ್‍ಕರೀಂ ಸಾಹಿಹುಸೇನ್ ಬಡಕಲ್ (48) ಹಾಗೂ ಮುಬಾರಕ ಗೌಸ್‍ಪಾಷಾ ಬಡಕಲ್ (22) ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮವಾಗಿ ತಯಾರಿಸಿದ್ದ 10 ಸಾವಿರ ರೂ. ಮೌಲ್ಯದ ತಂಬಾಕು ಉತ್ಪನ್ನ ಮಾವಾ, ಮಾವಾ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳಾದ ಅಡಿಕೆ, ತಂಬಾಕು, ಮಿಕ್ಸರ್ ಸೇರಿದಂತೆ 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ವಿಜಯಪುರದಲ್ಲಿ ಗೃಹ ಬಳಕೆಯ ಅನಿಲ ಅಭಾವ

Spread the loveವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಕೊರತೆ ಸಮಸ್ಯೆ ಮುಂದುವರೆ ದಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ