Breaking News

ವರ್ಷದ ಹಿಂದೆ ಮಗು ಕದ್ದಿದ್ದ ಮನೋವೈದ್ಯೆಯ ಬಂಧನ

Spread the love

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 1 ವರ್ಷಕ್ಕೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್‌ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಸದ್ಯ ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ ಕರ್ನಾಟಕ ಮೂಲದ ಮನೋವೈದ್ಯೆಯೇ ಆಟೋದಲ್ಲಿ ಬಂದು ಮಗು ಕದ್ದು ಹೋಗಿದ್ದು 15 ಲಕ್ಷಕ್ಕೆ ಮಗು ಕೊಡೋದಾಗಿ ದುಡ್ಡು ಪಡೆದಿದ್ದರು. ಸದ್ಯ ಪೊಲೀಸರ ತಂಡ ಮಗು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೇ 29, 2020 ರಂದು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದು ಮೇ 29, 2021 ರಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ವರ್ಷ ಅಂದ್ರೆ 2020 ರ ಮೇನಲ್ಲಿ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಆಗ ತಾನೇ ಜನ್ಮ ನೀಡಿದ್ದ ಮಗುವನ್ನು ಕಳ್ಳತನ ಮಾಡಲಾಗಿತ್ತು. ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆಟೋದಲ್ಲಿ ಪರಾರಿಯಾಗಿದ್ದಳು. ಆರೋಪಿ ಮಹಿಳೆಯ ಸ್ಕೆಚ್ ತಯಾರಿಸಿ ನೂರಾರು ಜನರ ವಿಚಾರಣೆ ನಡೆಸಲಾಗಿತ್ತು. ನೂರಾರು ಫೋನ್ ನಂಬರ್ ಟ್ರ್ಯಾಕ್ ಮಾಡಲಾಗಿತ್ತು. ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಸದ್ಯ ಈಗ ಈ ಪ್ರಕರಣಕ್ಕೆ ಕೊನೆ ಸಿಕ್ಕಿದೆ.

ಇನ್ನು ಮಗು ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ತಂದೆ ನವೀದ್ ಪಾಷ ಮತ್ತು ತಾಯಿ ಹುಸ್ನಾಬಾನು ಸಂತಸ ಹಂಚಿಕೊಂಡಿದ್ದಾರೆ. ತಾಯಿ ಹೆತ್ತ ಕರಳು ಸಿಕ್ಕ ಸುದ್ದಿ ಕೇಳಿ ಕಣ್ಣೀರು ಹಾಕಿದ್ರು. ಒಂದು ವರ್ಷದ ಬಳಿಕ ಮಗು ಸಿಕ್ಕಿದೆ. ಆದರೆ ಇನ್ನೂ ಪೊಲೀಸರು ಈ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಟೆಸ್ಟ್ಗಳನ್ನ ಮಾಡಬೇಕು ಅಂತಾ ಹೇಳಿದ್ದಾರೆ. ಆಮೇಲೆ ಅದು ನಮ್ಮ ಮಗನಾ ಅನ್ನೋದು ಗೊತ್ತಾಗಲಿದೆ. ನಮ್ಮದೆ ಮಗು ಅನ್ನೋದು ಇನ್ನೂ ಖಚಿತವಾಗಿಲ್ಲ ಎಂದು ಮಗು ಪೋಷಕರಾದ ನವೀದ್ ಪಾಷ ಮತ್ತು ಹುಸ್ನಾಬಾನು ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ