Breaking News

ಗೆಳತಿ ಮಲೈಕಾ ಮನೆ ಸಮೀಪದಲ್ಲೇ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್; ಬೆಲೆ ಎಷ್ಟು?

Spread the love

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚಿಗಷ್ಟೆ ಐಷಾರಾಮಿ ಮನೆ ಖರೀಸಿದ ಬೆನ್ನಲ್ಲೇ ಮತ್ತೋರ್ವ ನಟ ಅರ್ಜುನ್ ಕಪೂರ್ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅರ್ಜುನ್ ಮುಂಬೈನಲ್ಲಿ ವಿಲ್ಲಾ ಕೊಂಡುಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಮುಂಬೈನ ಹೃದಯ ಭಾಗದಲ್ಲಿ ಅರ್ಜುನ್ ಕಪೂರ್ ಸ್ಕೈ ವಿಲ್ಲಾ ಖರೀದಿ ಮಾಡಿದ್ದಾರಂತೆ. ಈ ವಿಲ್ಲಾ ಮುಂಬೈನ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರ ಅವರ ಮನೆಯ ಸಮೀಪವೇ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅರ್ಜುನ್ ಹೊಸ ವಿಲ್ಲಾ ಸಮೀಪದಲ್ಲೇ ಸಾಕಷ್ಟು ಕಲಾವಿದರ ಮನೆ ಕೂಡ ಇದೆ ಎಂದು ವರದಿಯಾಗಿದೆ.

 

26 ಅಂತಸ್ತಿನ ಕಟ್ಟಡವೂ ಸಮುದ್ರ ಮತ್ತು ಸ್ಕೈಲೈನ್ ನ ಸುಂದರ ನೋಟ ಹೊಂದಿದೆ. ಇದರ ಬೆಲೆ ಸುಮಾರು 20 ರಿಂದ 23 ಕೋಟಿ ರೂ. ಎಂದು ವರದಿಯಾಗಿದೆ. ಪ್ರತಿ ಸ್ಕೈ ವಿಲ್ಲಾವು 4 ಬೃಹತ್ ಮಲಗುವ ಕೋಣೆ ಮತ್ತು ಅಟ್ಯಾಚ್ ಸ್ನಾನದ ಕೋಣೆ ಹೊಂದಿದೆ. ಪ್ರತಿ ಕೋಣೆಯೂ ಅಡುಗೆ ಕೋಣೆ ಮತ್ತು ಬಾಲ್ಕನಿಯನ್ನು ಹೊಂದಿದೆಯಂತೆ.

ಇತ್ತೀಚಿಗಷ್ಟೆ ಬಿಗ್ ಬಿ ಅಮಿತಾಬ್ ಬಚ್ಚನ್ ಬಿಗ್ ಬಿ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿ ಸುದ್ದಿಯಾಗಿದ್ದರು. 31 ಕೋಟಿ ರೂ. ಬೆಲೆ ಬಾಳುವ ಡ್ಯೂಪ್ಲೆಕ್ಸ್ ಮನೆ ಖರೀದಿ ಮಾಡಿದ್ದಾರೆ. 6 ಕಾರುಗಳನ್ನು ಪಾರ್ಕ್ ಮಾಡುವ ಜಾಗವಿದ್ದು, 27 ಮತ್ತು 28ನೇ ಮಹಡಿಯಲ್ಲಿದೆಯಂತೆ. ಕ್ರಿಸ್ಟಲ್ ಪ್ರೈಡ್ ಗ್ರೂಪ್ ಬಿಲ್ಡರ್ ನಿಂದ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಅರ್ಜುನ್ ಕಪೂರ್ ಸದಾ ಗೆಳತಿ ಮಲೈಕಾ ಆರೋರಾ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಯಾವಾಗಲೂ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ. ಬಾಲಿವುಡ್ ನ ಈ ಜೋಡಿ ಹಕ್ಕಿ ಸದ್ಯದಲ್ಲೇ ಹಸೆಮಣೆ ಏರಲಿದೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಕೇಳಿಬರುತ್ತಲೇ ಇದೆ. ಆದರೆ ಪ್ರೀತಿ, ಪ್ರೇಮ, ಮದುವೆ ವಿಚಾರವಾಗಿ ಇಬ್ಬರೂ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ಈ ಜೋಡಿ ಯಾವಾಗ ಮದುವೆ ಆಗ್ತಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ