Breaking News

ಆನ್​ಲೈನ್ ಡೇಟಿಂಗ್​ ಹೆಸರಲ್ಲಿ​ ವೇಶ್ಯಾವಾಟಿಕೆ: ಐವರು ಉಗಾಂಡ ಯುವತಿಯರ ಬಂಧನ

Spread the love

ಚೈತನ್ಯಪುರಿ: ಆನ್​ಲೈನ್​ ಡೇಟಿಂಗ್​ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಉಗಾಂಡ ಮೂಲದ ಐವರು ಯುವತಿಯರನ್ನು ಹೈದರಾಬಾದ್​ನ ಚೈತನ್ಯಪುರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇನ್ಸ್​ಪೆಕ್ಟರ್​ ರವಿಕುಮಾರ್​, ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಯುವತಿಯರನ್ನು ಬಂಧಿಸಿದ್ದೇವೆ. ಆರೋಪಿಗಳು ಲೊಕ್ಯಾಂಟೋ ಹೆಸರಿನ ಆನ್​ಲೈಟ್​ ಡೇಟಿಂಗ್​ ಆಯಪ್​ನಲ್ಲಿ ಫೋಟೋಗಳನ್ನು ಹರಿಬಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದರು. ಶೋಧ ಕಾರ್ಯಾಚರಣೆ ನಡೆಸಿ ಅವರ ದಂಧೆಯನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸರು ಗ್ರಾಹಕರ ವೇಷದಲ್ಲಿ ಆಯಪ್​ನಲ್ಲಿರುವ ನಂಬರ್​ ಪಡೆದು ಜಾಲ ನಡೆಸುತ್ತಿದ್ದ ಓರ್ವನನ್ನು ಸಂಪರ್ಕಿಸಿದ್ದಾರೆ. ಇದಾದ ಬಳಿಕ ಆರೋಪಿ ದಿಲ್ಶುಕ್​ನಗರದ ರಾಜಧಾನಿ ಚಿತ್ರಮಂದಿರದ ವಿಳಾಸ ನೀಡಿ ಅಲ್ಲಿ ಮೂವರು ಯುವತಿಯರು ಇಬ್ಬರು ಮ್ಯಾನೇಜರ್​ ಜತೆಯಲ್ಲಿ ನಿಂತಿರುತ್ತಾರೆಂದು ಹೇಳಿದ್ದಾನೆ. ಸ್ಥಳಕ್ಕೆ ಹೋದ ಪೊಲೀಸರು ಗುರುವಾರ ಸಂಜೆ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಆರೋಪಿಗಳ ಬಳಿಕ ಅಕ್ರಮ ಡ್ರಗ್ಸ್​ ಸಹ ಪತ್ತೆಯಾಗಿದೆ. ಅವರಿಂದ ಸೆಲ್​ಫೋನ್​ 5,500 ರೂ. ನಗದು ಹಣ, 5 ಗ್ರಾಂ ಕೆಟಾಮೈನ್​ ಮತ್ತು 17 ಗ್ರಾಂ ಗುರುತಿಲ್ಲದ ಡ್ರಗ್ಸ್​ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳೆಲ್ಲರೂ ವಿಸಿಟಿಂಗ್​ ವೀಸಾ ಮೇಲೆ ಭಾರತಕ್ಕೆ ಬಂದು ಅಕ್ರಮವಾಗಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ಆರೋಪಿಗಳು ತೊಲಿಚೌಕಿಯಲ್ಲಿ ವಾಸವಿದ್ದರು


Spread the love

About Laxminews 24x7

Check Also

ವಿಕಸಿತ ಭಾರತ ಪರಿಕಲ್ಪನೆಯ ಕೇಂದ್ರದ ಬಜೆಟ್:ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the loveಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ನಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿತ್ವ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ