Breaking News

ಕೊರೋನಾ ಕರುಣಾಜನಕ ಘಟನೆ: ದಂಪತಿ ಸಾವು, 5 ದಿನದ ಹೆಣ್ಣುಮಗು ಅನಾಥ

Spread the love

ಮಂಡ್ಯ: ಕೊರೋನಾ ಸೋಂಕು ತಗುಲಿದ್ದರಿಂದ ದಂಪತಿ ಸಾವನ್ನಪ್ಪಿದ್ದು, 5 ದಿನದ ಹೆಣ್ಣುಮಗು ಅನಾಥವಾಗಿದೆ. ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿಯಲ್ಲಿ ಘಟನೆ ನಡೆದಿದೆ.

45 ವರ್ಷದ ನಂಜುಂಡೇಗೌಡ ಮತ್ತು 31 ವರ್ಷದ ಮಮತಾ ದಂಪತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ದಂಪತಿಯ 5 ದಿನದ ಹೆಣ್ಣುಮಗು ಅನಾಥವಾಗಿದೆ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ನಂಜುಂಡೇಗೌಡ ಕೊರೋನಾ ಸೋಂಕು ತಗುಲಿದ್ದರಿಂದ ಏಪ್ರಿಲ್ 30 ರಂದು ಮೃತಪಟ್ಟಿದ್ದರು.

ಗರ್ಭಿಣಿಯಾಗಿದ್ದ ಅವರ ಪತ್ನಿ ಮಮತಾ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಮೇ 11 ರಂದು ಹೆಣ್ಣು ಮಗುವಿಗೆ ಮಮತಾ ಜನ್ಮ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಸಾವನ್ನಪ್ಪಿದ್ದಾರೆ. ಮದುವೆಯಾಗಿ 9 ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈಗ ಮಗು ಜನಿಸಿದ್ದು ಸಂಭ್ರಮಿಸಲು ದಂಪತಿಯೇ ಇಲ್ಲ. ತಂದೆ, ತಾಯಿ ಇಲ್ಲದೇ ಮಗು ಅನಾಥವಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ