Breaking News

1 ಕೋಟಿ ಮಂದಿಗೆ ಲಸಿಕೆ! : ಲಸಿಕೆ ಪಡೆದವರಲ್ಲಿ ಸ್ತ್ರೀಯರೇ ಹೆಚ್ಚು

Spread the love

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಒಂದು ಕೋಟಿ ಡೋಸ್‌ ಕೋವಿಡ್ ಲಸಿಕೆ ವಿತರಿಸಲಾಗಿದೆ. ಅಭಿಯಾನದಲ್ಲಿ ಒಟ್ಟು 84.6 ಲಕ್ಷ ಮಂದಿ ಲಸಿಕೆ ಪಡೆದಿದ್ದು, 18.5 ಲಕ್ಷ ಮಂದಿ ಎರಡೂ ಡೋಸ್‌ ಪೂರ್ಣಗೊಳಿಸಿದ್ದಾರೆ.

ಲಸಿಕೆ ಅಭಿಯಾನ ಆರಂಭವಾಗಿ 110 ದಿನಗಳಾಗಿವೆ. ಗುರುವಾರದ ಅಂತ್ಯಕ್ಕೆ ಒಟ್ಟು 84.6 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 18.5 ಲಕ್ಷ ಮಂದಿ 2ನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ಒಟ್ಟು 1,03,01,805 ಡೋಸ್‌ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರದಿಂದ ಕಳೆದ 4 ದಿನಗಳಲ್ಲಿ 8 ಲಕ್ಷ ಡೋಸ್‌ ಬಂದಿರುವ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನ ಮತ್ತೆ ಚುರುಕಾಗಿದೆ.

ಮಹಿಳೆಯರೇ ಹೆಚ್ಚು :

ಪುರುಷರಿಗಿಂತ 3.4 ಲಕ್ಷ ಅಧಿಕ ಮಹಿಳೆಯರು ಲಸಿಕೆ ಪಡೆದಿದ್ದಾರೆ. 43.9 ಲಕ್ಷ ಮಹಿಳೆಯರು, 40.6 ಲಕ್ಷ ಪುರುಷರು, 1,104 ತೃತೀಯ ಲಿಂಗಿಗಳಿಗೆ ಲಸಿಕೆ ಹಾಕಲಾಗಿದೆ. ಬುಧವಾರ 75 ಸಾವಿರ ಕೊವ್ಯಾಕ್ಸಿನ್‌ ಮತ್ತು 2 ಲಕ್ಷ ಕೊವಿಶೀಲ್ಡ್‌ ಲಸಿಕೆ ಬಂದಿವೆ. ಮೇ 20ರೊಳಗೆ ಇನ್ನೂ ಏಳು ಲಕ್ಷದಷ್ಟು ಬರಲಿದೆ.

ಶೇ. 91ರಷ್ಟು ಕೊವಿಶೀಲ್ಡ್‌ :

ಒಂದು ಕೋಟಿ ಡೋಸ್‌ನಲ್ಲಿ 93.4 ಲಕ್ಷ ಡೋಸ್‌ ಕೊವಿಶೀಲ್ಡ್‌, 9.6 ಲಕ್ಷ ಡೋಸ್‌ ಕೊವ್ಯಾಕ್ಸಿನ್‌ ಹಾಕಲಾಗಿದೆ. ಕೆಲವೆಡೆ ಕೊವ್ಯಾಕ್ಸಿನ್‌ ಲಸಿಕೆಯೇ ಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಎರಡು ಲಸಿಕೆಗಳೂ ಒಂದೇ ಪರಿಣಾಮ ಬೀರುತ್ತವೆ. ಜನರು ಲಭ್ಯವಿರುವ ಲಸಿಕೆ ಸ್ವೀಕರಿಸಿ ಕೊರೊನಾದಿಂದ ರಕ್ಷಣೆ ಪಡೆಯಬೇಕು ಎಂದು ಲಸಿಕೆ ವಿಭಾಗದ ಉಪನಿರ್ದೇಶಕಿ ಡಾ| ಬಿ.ಎನ್‌. ರಜನಿ ಮನವಿ ಮಾಡಿದ್ದಾರೆ.

ಟಾಪ್‌ 5 ಜಿಲ್ಲೆಗಳು :

ಜಿಲ್ಲೆ ಲಸಿಕೆ ಪಡೆದವರು (ಮೊದಲ ಡೋಸ್‌)

ಬೆಂಗಳೂರು 16.9 ಲಕ್ಷ

ಮೈಸೂರು 6.48 ಲಕ್ಷ

ಬೆಳಗಾವಿ 5.36 ಲಕ್ಷ

ಬಳ್ಳಾರಿ 3.57 ಲಕ್ಷ

ತುಮಕೂರು 3.38 ಲಕ್ಷ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ