Breaking News
Home / ರಾಜಕೀಯ / ಪುತ್ತೂರು ನಿಡ್ಪಳ್ಳಿಯಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಪುತ್ತೂರು ನಿಡ್ಪಳ್ಳಿಯಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Spread the love

ಪುತ್ತೂರು, ಮೇ 01: ಅವಿವಾಹಿತ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ವರದಿಯಾಗಿದೆ.‏

ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕರವರ ಪುತ್ರ ವಿಶ್ವನಾಥ ಮೃತಪಟ್ಟವರಾಗಿದ್ದಾರೆ. ಕೂಲಿ ಕಾರ್ಮಿಕರಾಗಿರುವ ವಿಶ್ವನಾಥರವರ ಮನೆಯ ಸಮೀಪದಲ್ಲಿರುವ ಕಟ್ಟಡದ ಹೊರ ಜಗಲಿಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮುಂಜಾನೆ ಪತ್ತೆಯಾಗಿದೆ.

ತಲೆಯಲ್ಲಿ ಮುಂಡಾಸು ಕಟ್ಟಿದ ಹಾಗೆಯೇ ಇರುವುದಲ್ಲದೆ ಕೈಗಳು ಕಟ್ಟಡದ ಕಂಬಕ್ಕೆ ತಾಗು ರೀತಿಯಲ್ಲಿತ್ತು. ಅಲ್ಲದೆ ಕಾಲು ನೆಲಕ್ಕೆ ತಾಗುವ ರೀತಿಯಲ್ಲಿದ್ದು ಈ ಸಾವಿನ ಕುರಿತು ಸಾರ್ವಜನಿಕರು ಅನುಮಾನ‌ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಅಗಮಿಸಿ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ