Breaking News

ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಎಲ್ಲಾ ವಿವರ ಮುಂದಿನ 24 ಗಂಟೆಯಲ್ಲಿ ಮೊಬೈಲ್ ನಲ್ಲಿ ಲಭ್ಯ

Spread the love

 ಬೆಳಗಾವಿ –  ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರೀಶ್ ಕುಮಾರ, ಸಮಾಲೋಚಕರೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಸಜ್ಜಿತ ಜಿಲ್ಲಾ ಮಟ್ಟದ ಕೋವಿಡ್ ವಾರ್ ರೂಮ್‌ನ ಸೇವೆಯು 24×7 ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಸ್ಥಾಪಿಸಿರುವ ತಾಲ್ಲೂಕಾ ಕೋವಿಡ್ ವಾರ್ ರೂಮ್‌ಗಳಿಂದ ಪ್ರತಿದಿನ ಕೋವಿಡ್-19 ಸೋಂಕಿತರ ಹಾಗೂ ಪ್ರಾಥಮಿಕ/ದ್ವಿತೀಯ ಸಂಪರ್ಕಿತರ ಸಂಪೂರ್ಣ ವಿವರ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಬೆಡ್‌ಗಳ ವಿವರ, ವೆಂಟಿಲೇಟರ್‌ ಹೊಂದಿರುವ ಬೆಡ್‌ಗಳ ವಿವರ, Oxigen ಹೊಂದಿರುವ ಬೆಡ್‌ಗಳ ವಿವರ, ರೆಮ್‌ಡೆಸಿವರ್‌ ಇಂಜೆಕ್ಷನ್‌ಗಳ ಪೂರೈಕೆ ಹಾಗೂ ಬೇಡಿಕೆಯ ವಿವರ, Oxigen ಪೂರೈಕೆ ಹಾಗೂ ಬೇಡಿಕೆಯ ವಿವರ ಹಾಗೂ ಇನ್ನಿತರೇ ಬೇಕಾಗುವ ಎಲ್ಲಾ ವಿವರಗಳನ್ನು ಪಡೆಯಬೇಕು.
ಬೆಳಗಾವಿ ಜಿಲ್ಲೆಯ ಎಲ್ಲಾ ಜನರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸುವ ಕುರಿತು ರೂಪುರೇಷೆ ಹಾಗೂ ಜಿಲ್ಲೆಯ ಎಲ್ಲಾ ಸಾಮಾನ್ಯ ಜನರಿಗೂ ಸಹ ಅತ್ಯಂತ ಸುಲಭವಾಗಿ ಮಾಹಿತಿ ಲಭ್ಯವಾಗುವಂತೆ Website ನ್ನು ಸೃಜಿಸಬೇಕು. ಮುಂದಿನ 24 ಘಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಕೋವಿಡ್‌ಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
NOTICE: ಕೇರ್ ಸೆಂಟರ್‌ಗಳಲ್ಲಿರುವ ಬೆಡ್‌ಗಳ ವಿವರ, ವೆಂಟಿಲೇಟರ್‌ ಹೊಂದಿರುವ ಬೆಡ್‌ಗಳ ವಿವರ, Oxigen ಹೊಂದಿರುವ ಬೆಡ್‌ಗಳ ವಿವರ, ರೆಮ್‌ಡೆಸಿವರ್‌ ಇಂಜೆಕ್ಷನ್‌ಗಳ ಪೂರೈಕೆ ಹಾಗೂ ಬೇಡಿಕೆಯ ವಿವರ, Oxigen ಪೂರೈಕೆ ಹಾಗೂ ಬೇಡಿಕೆಯ ವಿವರ ಹಾಗೂ ಇನ್ನಿತರೇ ಬೇಕಾಗುವ ಎಲ್ಲಾ ವಿವರ ಮುಂದಿನ 24 ಗಂಟೆಯಲ್ಲಿ ಮೊಬೈಲ್ ನಲ್ಲಿ ಲಭ್ಯ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ