Breaking News

ಬೆಡ್ ಗಾಗಿ ರಾತ್ರಿ ಇಡೀ ಪರದಾಡಿದ ಕೋವಿಡ್ ಸೋಂಕಿತ, ಕುಳಿತ ಚೇರ್ ನಲ್ಲೇ ಸಾವು

Spread the love

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಸಿಗದ ಪರಿಸ್ಥಿತಿ ಮುಂದುವರೆದಿದೆ. ಕೊರೋನಾ ಸೋಂಕಿತ ತಂದೆಗೆ ಚಿಕಿತ್ಸೆ ಕೊಡಿಸೋದಕ್ಕಾಗಿ ರಾತ್ರಿಯಿಡೀ ಪರದಾಡಿದ್ರೂ, ಬೆಡ್ ಸಿಗದೇ ಬೆಳಗಾಗೋ ವೇಳೆಗೆ ಸಾವನ್ನಪ್ಪಿರುವಂತ ಧಾರುಣ ಘಟನೆ ನಡೆದಿದೆ.

ಯಲಹಂಕದ 62 ವರ್ಷದ ವ್ಯಕ್ತಿಗೆ ಕೊರೋನಾ ತಗುಲಿತ್ತು. ಇಂತಹ ತಂದೆಗೆ ಚಿಕಿತ್ಸೆಗಾಗಿ ಐಸಿಯು ಬೆಡ್ ಅವಶ್ಯಕತೆ ಇತ್ತು. ರಾತ್ರಿಯಿಡೀ ಪರದಾಡಿದ್ರೂ ಚಿಕಿತ್ಸೆಗಾಗಿ ಬೆಡ್ ಸಿಕ್ಕಿಲ್ಲ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇರಿನಲ್ಲೇ ಕುಳಿತು, ಆಕ್ಸಿಜನ್ ಹಾಕಿಸಿಕೊಂಡು ನರಳಾಡುತ್ತಿದ್ದಂತ ವ್ಯಕ್ತಿ ಹಾಗೇ ಚೇರ್ ನಲ್ಲೇ ಪ್ರಾಣ ಬಿಟ್ಟಿದ್ದಾನೆ.

ಅಂದಹಾಗೇ, ನಿನ್ನೆ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾತ್ರಿ ಇಡೀ ಪರದಾಡಿದ ನಂತ್ರ ಐಸಿಯು ಬದಲು ಆಕ್ಸಿಜನ್ ಬೆಡ್ ಸಿಕ್ಕಿತ್ತಾದ್ರೂ, ಆಸ್ಪತ್ರೆಗೆ ಸೇರಿಸೋ ಮೊದಲೇ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ