Breaking News

ಪ್ರಧಾನಿ ಮೋದಿ ಅವರೇ ತಮ್ಮ ಮಾತುಗಳನ್ನು ಪಾಲನೆ ಮಾಡುತ್ತಿಲ್ಲ: ಸತೀಶ ಜಾರಕಿಹೊಳಿ

Spread the love

ಬೆಳಗಾವಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುವ ಪ್ರಧಾನಿ ಮೋದಿ ಅವರೇ ತಮ್ಮ ಮಾತುಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೀಪ ಹಚ್ಚುವುದರಿಂದ‌ ಕೊರೊನಾ ಸೋಂಕು ಹೋಗುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾರೆ. ಜನರನ್ನು ಒಂದೆಡೆ ಸೇರಿಸುವಂತಹ ಟಾಸ್ಕ್ ಗಳನ್ನು‌ ನೀಡುತ್ತಾರೆ.‌ ಮುಂದೆ ಯಾವ ಟಾಸ್ಕ್ ನೀಡುತ್ತಾರೆ ಗೊತ್ತಿಲ್ಲ ಎಂದು ಟೀಕಿಸಿದರು.

ಕೊರೊನಾ ಸೋಂಕು ಭೀತಿಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ತರಹ ಆಗುತ್ತಿದೆ. ಎಲ್ಲ ರಾಜ್ಯದವರು ಸೇರಿಕೊಂಡು ಒಗ್ಗಟ್ಟಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.

ದೀಪ ಹಚ್ಚುವುದು, ಚಪ್ಪಾಳೆ‌ ಹೊಡೆಯುವುದರಿಂದ ಕೊರೊನಾ ಹೋಗುವುದಿಲ್ಲ. ವೈಜ್ಞಾನಿಕವಾಗಿ ವಿಚಾರ‌ ಮಾಡುವಂತಾಗಬೇಕು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ