Breaking News

ಕೊನೆಗೂ ಫಲಿಸಿತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ; ಸೋನು ಸೂದ್​ಗೆ ಕೊರೊನಾ ನೆಗೆಟಿವ್

Spread the love

ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್​ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್​ ಸೋಂಕು ತಗುಲಿರುವುದು ಧೃಡವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ಸೋನು ಸೂದ್​ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಈಗ ಈ ಪ್ರಾರ್ಥನೆಗೆ ಫಲ ಸಿಕ್ಕಿದೆ. ಸೋನು ಸೂದ್​ಗೆ ಕೊರೊನಾ ನೆಗೆಟಿವ್​ ಬಂದಿದೆ.

‘ಕೊವಿಡ್​ ಪಾಸಿಟಿವ್​ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್​ ಪಾಸಿಟಿವ್​ ಆಗಿದೆ. ಎಲ್ಲರಿಗೂ ಹಾಯ್​. ಇಂದು ಬೆಳಗ್ಗೆ ನನಗೆ ಕೊವಿಡ್​-19 ಪಾಸಿಟಿವ್​ ಆಗಿದೆ ಎಂಬುದನ್ನು ತಿಳಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕ್ವಾರಂಟೈನ್​ ಆಗಿದ್ದೇನೆ. ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ. ನಿಮಗಾಗಿ ನಾನು ಸದಾ ಇರುತ್ತೇನೆ ಎಂಬುದನ್ನು ನೆನಪಿಡಿ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಸೋನು ಸೂದ್​ ಏಪ್ರಿಲ್​ 17ರಂದು ತಿಳಿಸಿದ್ದರು. ಇದಾದ ಒಂದು ವಾರದ ಬಳಿಕ ಅವರಿಗೆ ಕೊರೊನಾ ಟೆಸ್ಟ್​ ನೆಗೆಟಿವ್​ ಬಂದಿದೆ.

ಈ ವಿಚಾರವನ್ನು ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ನೆಗೆಟಿವ್​ ಬಂದಿದೆ ಎಂದು ಸನ್ನೆ ಮೂಲಕ ತೋರಿಸಿದ್ದಾರೆ. ಈ ವಿಚಾರ ತಿಳಿದು ಸೋನು ಅಭಿಮಾನಿಗಳು ಖುಷಿಯಾಗಿದ್ದಾರೆ.


Spread the love

About Laxminews 24x7

Check Also

ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.

Spread the love ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ