Breaking News

ಕೊರೊನಾ ವರದಿ “ನೆಗೆಟಿವ್” ಬಂದಿದ್ದಕ್ಕೆ ವೈದ್ಯರನ್ನು ಹಿಗ್ಗಾಮುಗ್ಗ ಥಳಿಸಿದ ವ್ಯಕ್ತಿ

Spread the love

ಮುಂಬೈ, ಏಪ್ರಿಲ್ 16: ತನ್ನ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ವೈದ್ಯರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯಲ್ಲಿ ನಡೆದಿದೆ.

 

ಗೋಂಡಿಯಾದ ಆರೋಗ್ಯ ಕೇಂದ್ರದಲ್ಲಿ, ವ್ಯಕ್ತಿಯೊಬ್ಬ ಆತನ ಕುಟುಂಬದ ಮೂರು ಸದಸ್ಯರೊಂದಿಗೆ ಆರ್‌ಟಿಪಿಸಿಆರ್ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ. ಪರೀಕ್ಷಾ ವರದಿಯಲ್ಲಿ ಕುಟುಂಬದ ಮೂವರದ್ದು ಪಾಸಿಟಿವ್ ಬಂದಿದ್ದು, ಈ ವ್ಯಕ್ತಿಯ ವರದಿ ಮಾತ್ರ ನೆಗೆಟಿವ್ ಬಂದಿದೆ. ಹೀಗಾಗಿ ಪರೀಕ್ಷೆಯ ವರದಿಯೇ ಸುಳ್ಳು ಎಂದು ಆಕ್ರೋಶಗೊಂಡ ಆತ ವರದಿ ಕೈಸೇರುತ್ತಿದ್ದಂತೆ ಏಕಾಏಕಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಆಸ್ಪತ್ರೆಯಲ್ಲಿಯೇ ವೈದ್ಯರನ್ನು ಗಂಭೀರವಾಗಿ ಥಳಿಸಿದ್ದಾನೆ.

ವೈದ್ಯರ ಕತ್ತಿನ ಪಟ್ಟಿ ಹಿಡಿದು, ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ತಪ್ಪು ಕೊರೊನಾ ಪರೀಕ್ಷಾ ವರದಿಯನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಅದು ಹೇಗೆ ಕುಟುಂಬದ ಮೂವರ ಪರೀಕ್ಷಾ ವರದಿ ಪಾಸಿಟಿವ್ ಬಂದು ತನ್ನ ವರದಿ ಮಾತ್ರ ನೆಗೆಟಿವ್ ಬಂದಿದೆ ಎಂದು ಪ್ರಶ್ನಿಸಿದ್ದಾನೆ. ವೈದ್ಯರು ಹಲ್ಲೆ ನಡೆಸಿದವನ ಮೇಲೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ