Breaking News

‘ನಿನ್ನ ವಿಳಾಸ ಹೇಳು, ಬ್ರಾ ಕಳುಹಿಸುತ್ತೇನೆ’ ಎಂದ ಯುವತಿಗೆ ನಟಿ ಕೊಟ್ಟ ಉತ್ತರವೇನು?

Spread the love

ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇತ್ತೀಚಿಗಷ್ಟೆ ನೆಟ್ಟಿಗನೊಬ್ಬ ಬ್ರಾ (ಒಳ ಉಡುಪು) ಸೈಜ್ ಕೇಳಿದ್ದ ಘಟನೆ ಕುರಿತು ಬಾಲಿವುಡ್ ಕಿರುತೆರೆ ನಟಿ ಸಯಂತನಿಗೆ ಘೋಷ್ ಹೇಳಿಕೊಂಡಿದ್ದರು.

ಇದೀಗ, ಕಿರುತೆರೆ ನಟಿ ಅನುಷಾ ದಾಂಡೇಕರ್ ಅವರಿಗೆ ”ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.

 

ಕಿರುತೆರೆ ನಟಿ ಹಾಗೂ ವಿಜೆ ಆಗಿರುವ ಅನುಷಾ ದಾಂಡೇಕರ್ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ನಟಿ ಬ್ರಾ (ಒಳ ಉಡುಪು) ಧರಿಸಿರಲಿಲ್ಲ. ಬ್ರಾ ಲೆಸ್ ಡ್ರೆಸ್ ತೊಟ್ಟಿದ್ದ ನಟಿಯ ಫೋಟೋಗೆ ಯುವತಿಯೊಬ್ಬಳು ಕಾಮೆಂಟ್ ಮಾಡಿದ್ದಾರೆ.

”ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ” ಎಂದು ಯುವತಿ ಟ್ರೋಲ್ ಮಾಡಿರುವುದು ಗಮನಿಸಬೇಕು. ಅದಕ್ಕೆ ಉತ್ತರಿಸಿ ನಟಿ ಅನುಷಾ ”ಅದನ್ನು ನೀನೇ ಇಟ್ಕೊ, ಬ್ರಾ ಇಲ್ಲದೇ ನಾನು ಚೆನ್ನಾಗಿದ್ದೇನೆ. ಧನ್ಯವಾದ” ಎಂದು ತಿರುಗೇಟು ಕೊಟ್ಟಿದ್ದಾರೆ.

ನಟಿ ಹಾಗೂ ವಿಜೆ ಅನುಷಾ ಸ್ವಲ್ಪ ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆಗಿನ ಸಂಬಂಧ ಮುರಿದುಕೊಂಡಿರುವುದಾಗಿ ಘೋಷಿಸಿದ್ದರು. ನಟ ಕರಣ್ ಕುಂದ್ರಾ ಅವರ ಜೊತೆ ಪ್ರೀತಿಯಲ್ಲಿದ್ದ ನಟಿ ತಮ್ಮ ರಿಲೇಶನ್‌ಷಿಪ್ ಅಂತ್ಯವಾಗಿಸಿದ್ದರು.

ಕರಣ್ ಕುಂದ್ರಾ ಜೊತೆಗಿನ ಪ್ರೀತಿ ಮುರಿದುಕೊಂಡು ಮರುದಿನವೇ ನಟ ಜೇಸನ್ ಅವರು ನಟಿ ಅನುಷಾ ದಾಂಡೇಕರ್ ಜೊತೆಗಿನ ಸಂಬಂಧ ದೃಢಪಡಿಸಿದ್ದರು.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ