Breaking News

ವೀಡಿಯೊ ಮಾಡಿದ್ದು ನಾನೇ: ಕಾರಣ ಬಿಚ್ಚಿಟ್ಟ ಸಿಡಿ ಯುವತಿ

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗಿನ ರಾಸಲೀಲೆಯ ವೀಡಿಯೊ ಮಾಡಿದ್ದು ನಾನೆ‌ ಆದರೆ ಬ್ಲಾಕ್ ಮೇಲ್ ಮಾಡುವ ಉದ್ದೇಶ ಇರಲಿಲ್ಲ ಎಂದು ಸಿಡಿ ಯುವತಿ ಒಪ್ಪಿಕೊಂಡಿದ್ದಾಳೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಬೆಂಗಳೂರಿನ ಎಸ್ ಐಟಿ ಮುಂದೆ ಶನಿವಾರ ಹಾಜರಾದ ಸಿಡಿ ಯುವತಿ ಘಟನೆಯನ್ನು ವಿವರಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಶನಿವಾರ  ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೊಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆಗೆ ಹಾಜರಾಗಿದ್ದಳು.

ಕಳೆದ ನಾಲ್ಕು ದಿನಗಳಿಂದಲೂ ಯುವತಿಯ ತೀವ್ರ ವಿಚಾರಣೆ ನಡೆಯುತ್ತಿದ್ದು, ಹಲವು ಮಹತ್ವದ ವಿಷಯ ಹೇಳಿದ್ದಾಳೆ ಎನ್ನಲಾಗಿದೆ.

ಯುವತಿಯ ವಿಚಾರಣೆ ಇಂದು ಅಂತ್ಯಗೊಳ್ಳುವ ಸಾಧ್ಯತೆ ಇದ್ದು, ಯುವತಿಯ ಹೇಳಿಕೆ ಪೂರ್ಣಗೊಂಡ ನಂತರ ರಮೇಶ್ ಜಾರಕಿಹೊಳಿಯನ್ನು ಕರೆಸುವ ಸಾಧ್ಯತೆ ಇದೆ.

ಯುವತಿಗೆ ಸಿಡಿ ಗ್ಯಾಂಗ್ ನವರು ಹೇಗೆ ಪರಿಚಯ, ಸಿಡಿ ಬಿಡುಗಡೆ ಮಾಡೋಕೆ ನೀವೇ ಹೇಳಿದ್ರಾ? ನಿಮ್ಮ ಗಮನಕ್ಕೆ ಬಾರದ ಹಾಗೆಯೇ ಸಿಡಿ ಬಿಡುಗಡೆ ಆಯ್ತಾ? ಸಿಡಿ ಗ್ಯಾಂಗ್ ನಲ್ಲಿ ಇರೋರಿಗೆ ಯಾರಿಗಾದ್ರೂ ಸಿಡಿಯನ್ನು ಕೊಟ್ಟಿದ್ರಾ? ಮುಂತಾದ ಪ್ರಶ್ನೆಗಳನ್ನು ಕೇಳಲಾಗಿದೆ.

ಮಾನಸಿಕಕವಾಗಿ ಜಾರಕಿಹೊಳಿ ನೋಯಿಸಿದ್ದರಿಂದ ವೀಡಿಯೊ ನಾನೇ ಮಾಡಿದ್ದೆ. ಆದರೆ ಬ್ಲಾಕ್ ಮೇಲ್ ಮಾಡುವ ಉದ್ದೇಶ ಇರಲಿಲ್ಲ. ಸಿಡಿ ತಗೊಂಡು ಬೇರೆ ಯಾರೋ ಬ್ಲಾಕ್ ಮೇಲ್ ಮಾಡಿದ್ದರೆ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ