Breaking News

ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್​ ವಜಾ

Spread the love

ಜೈಪುರ: ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಮೇಲೆ ಆಗಿರುವ ಅನ್ಯಾಯದ ವಿರುದ್ಧ ದೂರು ದಾಖಲು ಮಾಡಲು ಬಂದರೆ, ಪೊಲೀಸ್​ ಅಧಿಕಾರಿ ದೂರು ದಾಖಲು ಮಾಡಬೇಕಿದ್ದರೆ ನನ್ನ ಜತೆ ಮಲಗು ಎಂದು ಹೇಳಿರುವ ಭಯಾನಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಈ ಕಾಮುಕ ಎಸಿಪಿಯ ಹೆಸರು ಕೈಲಾಶ್​ ಬೊಹರಾ. ಮಹಿಳಾ ದೌರ್ಜನ್ಯ ವಿರುದ್ದದ ವಿಶೇಷ ತಂಡದ ಎಸಿಪಿಯಾಗಿದ್ದ ಬೋಹರಾ ಇಂಥದ್ದೊಂದು ನೀಚ ಕೃತ್ಯ ಎಸಗಿದ್ದು, ಈತನ ವಿರುದ್ಧ ಸಂತ್ರಸ್ತೆ ಉನ್ನತ ಅಧಿಕಾರಿಗಳಲ್ಲಿ ದೂರು ದಾಖಲು ಮಾಡಿದ್ದಳು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್​ ಇಲಾಖೆ ಬೊಹರಾನನ್ನು ವಜಾ ಮಾಡಿ ಆದೇಶಿಸಿದೆ. ಈ ವಜಾ ಆದೇಶಕ್ಕೆ ರಾಜ್ಯಪಾಲರು ಕೂಡ ಅನುಮೋದನೆ ನೀಡಿದ್ದಾರೆ.

ಕಳೆದ ತಿಂಗಳು ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಇದರ ಬಗ್ಗೆ ದೂರು ದಾಖಲು ಮಾಡಲು ಹೋಗಿದ್ದೆ. ಆ ಸಮಯದಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು ನನ್ನ ಜತೆ ಲೈಂಗಿಕ ಸಂಪರ್ಕ ಮಾಡು ಎಂದು ಬೊಹರಾ ಹೇಳಿರುವುದಾಗಿ ಯುವತಿ ದೂರಿದ್ದಾಳೆ. ಮೊದಲು ದೂರು ದಾಖಲು ಮಾಡಿಕೊಳ್ಳಲು ನನ್ನ ಬಳಿ ಹಣ ಕೇಳಿದ. ಆದರೆ ನನ್ನ ಬಳಿ ಹಣ ಇರಲಿಲ್ಲ, ಆಗ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ಯುವತಿಯ ದೂರನ್ನು ಆಧರಿಸಿ ಎಸಿಬಿ ಪೊಲೀಸರು ಬೊಹರಾನನ್ನು ಬಂಧಿಸಿದ್ದರು. ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಮಂಡಲ ಅವೇಶನದಲ್ಲಿ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಈತ ಕಾಮುಕ ಎಸಿಪಿ ಕೆಲಸ ಕಳೆದುಕೊಂಡಿದ್ದಾನೆ.


Spread the love

About Laxminews 24x7

Check Also

ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

Spread the loveದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ