Breaking News

ಸಿ.ಡಿ. ಪ್ರಕರಣ: ವಿಡಿಯೊ ಚಿತ್ರೀಕರಿಸಿದ್ದು ನಾನೇ ಎಂದ ಯುವತಿ

Spread the love

ಬೆಂಗಳೂರು: ಸಿ.ಡಿ.ಯಲ್ಲಿರುವ ವಿಡಿಯೊ ಮೂಲದ ಬಗ್ಗೆ ಸಂತ್ರಸ್ತ ಯುವತಿ ತನಿಖಾಧಿಕಾರಿಗೆ ವಿವರ ನೀಡಿದ್ದಾರೆ. ತಾನೇ ವಿಡಿಯೊ ಚಿತ್ರೀಕರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಬುಧವಾರ ತನಿಖಾಧಿಕಾರಿ ಎಂ.ಸಿ. ಕವಿತಾ ವಿಚಾರಣೆ ನೀಡಿದ್ದು, ‘ಸಿ.ಡಿ.ಯಲ್ಲಿರುವ ವಿಡಿಯೊ ಅಸಲಿ. ನನಗೆ ಕೆಲಸ ಕೊಡಿಸಲಾಗದು ಎಂದಿದ್ದ ರಮೇಶ ಜಾರಕಿಹೊಳಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರು. ಅದರಿಂದ ತುಂಬಾ ನೋವಾಗಿತ್ತು. ಅದಕ್ಕೆ ನಾನೇ, ಇಬ್ಬರು ಸೇರುವ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದೆ. ಮೂಲ ದೃಶ್ಯವನ್ನೂ ನಿಮಗೆ ನೀಡುತ್ತೇನೆ’ ಎಂದು ಯುವತಿ, ತನಿಖಾಧಿಕಾರಿಗೆ ಹೇಳಿರುವುದಾಗಿ ಗೊತ್ತಾಗಿದೆ.

‘ಎಂಜಿನಿಯರಿಂಗ್ ಮುಗಿಸಿದ್ದೇನೆಂದು ತಿಳಿದುಕೊಂಡು ಕೆಲಸ ಕೊಡಿಸುವ ಭರವಸೆ ನೀಡಿದ್ದರು. ನಂತರ, ತಾವು ಹೇಳಿದಂತೆ ಸಹಕರಿಸುವಂತೆ ಹೇಳಿದ್ದರು. ಸಚಿವರಾಗಿದ್ದರಿಂದ ಕೆಲಸ ಸಿಗಬಹುದೆಂಬ ಆಸೆಯಿಂದ ಅವರು ಹೇಳಿದ್ದಕ್ಕೆಲ್ಲ ಒಪ್ಪಿದೆ. ಲೈಂಗಿಕವಾಗಿ ನನ್ನನ್ನು ಬಳಸಿಕೊಂಡರು’ ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ