Breaking News

ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣ ಕಡಿತ

Spread the love

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿದೆ.

ಇದಾದ ನಂತರದಲ್ಲಿ ಅಂತ್ಯೋದಯ ಕಾರ್ಡ್ ಅಕ್ಕಿಯನ್ನು ಕೂಡ ಕಡಿತ ಮಾಡಲು ನಿರ್ಧರಿಸಲಾಗಿದ್ದು 35 ಕೆಜಿ ಅಕ್ಕಿಯ ಬದಲು 15 ಕೆಜಿ ಅಕ್ಕಿ ಜೊತೆಗೆ 20 ಕೆಜಿ ರಾಗಿ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ.

ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಕಡಿತಗೊಳಿಸಿ 15 ಕೆಜಿ ಅಕ್ಕಿ, 20 ಕೆಜಿ ರಾಗಿ ನೀಡಲಾಗುವುದು. ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ದಕ್ಷಿಣ ಕರ್ನಾಟಕದಲ್ಲಿ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ, ಪ್ರತಿ ಕಾರ್ಡ್ ಗೆ 2 ಕೆಜಿ ಗೋಧಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ 2 ಕೆಜಿ ಅಕ್ಕಿ, 3 ಕೆಜಿ ಜೋಳ, ಪ್ರತಿ ಕಾರ್ಡ್ ಗೆ 2 ಕೆಜಿ ಗೋಧಿ ನೀಡಲಾಗುವುದು. ಏಪ್ರಿಲ್ 1 ರಿಂದ ಹೊಸ ವ್ಯವಸ್ಥೆಯಡಿ ಪಡಿತರ ವಿತರಿಸಲು ಆಹಾರ ಇಲಾಖೆ ಕ್ರಮಕೈಗೊಂಡಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ