Breaking News

ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತೆ :ವಾಟಾಳ್ ನಾಗರಾಜ್

Spread the love

ಮೈಸೂರು : ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತದೆ ಎಂದು ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬಿಎಸ್​ವೈಗೆ ಕುಟುಕಿದ್ದಾರೆ. ನಂಜನಗೂಡಿನಲ್ಲಿ ಮಾ.26ರಂದು ಪಂಚ ಮಹಾರಥೋತ್ಸವ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆದರೆ, ರಮೇಶ್ ಜಾರಕಿಹೊಳಿಯನ್ನು ಪರಮ ಪವಿತ್ರ ಎಂದು ಬಿಂಬಿಸುತ್ತಿದ್ದಾರೆ. ಜಾರಕಿಹೊಳಿ ಪರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಬಾರದ ಅನಾಚಾರವನ್ನು ನೇರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆರು ಜನ ಮಂತ್ರಿಗಳು ಬಾಂಬೆಗೆ ಹೋಗಿ ಏನೇನು ಮಾಡಿದ್ರು ಯಾರಿಗೆ ಗೊತ್ತು? ಅದೆಲ್ಲಾ ಆಚೆ ಬರುತ್ತೆ ಅಂತಾ ಕೋರ್ಟ್​ಗೆ ಹೋಗಿ ಸ್ಟೇ ತಂದಿದ್ದಾರೆ. ಮಾನ-ಮರ್ಯಾದೆ ಇದ್ದವರು ಕೋರ್ಟ್​ಗೆ ಹೋಗ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಅನುಮತಿಯಿಲ್ಲ. ಯಡಿಯೂರಪ್ಪ ಹುಚ್ಚ ದೊರೆ, ಹೈಲ್ ದೊರೆ, ಪಕ್ಷಾಂತರಿ ಕೆಟ್ಟ ಮುಖ್ಯಮಂತ್ರಿ. ಉಪಚುನಾವಣೆ ಘೋಷಣೆಯಾಗಿದೆ. ಅಲ್ಲಿಗೆ ಕೊರೊನಾ ಬರಲ್ವಾ? ಅಲ್ಲಿ ಚುನಾವಣೆ ಮಾಡ್ತೀರಾ? ಅಥವಾ ನಿಲ್ಲಿಸುತ್ತೀರಾ? ಜಾತ್ರೆ ಮಾಡಿದ್ರೆ ಕೊರೊನಾ ಬರುತ್ತೆ, ಚುನಾವಣೆ ಮಾಡಿದ್ರೆ ಬರಲ್ವಾ ಎಂದು ಛೇಡಿಸಿದರು.

ಯಡಿಯೂರಪ್ಪನಿಗೆ ವೋಟ್ ಕೊಟ್ಟು ಇವತ್ತು ಜನರು ಅನುಭವಿಸ್ತಾ ಇದ್ದೀರಿ ನೋಡಿ. ಈ ಸರ್ಕಾರದ ಎಲ್ಲಾ ಮಂತ್ರಿಗಳು ಹುಚ್ಚರು. ಇವರನ್ನೆಲ್ಲಾ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಸರ್ಕಾರ ನಡೆಸೋರಿಗೆ ತಲೆ ಇಲ್ಲ. ಮೊದಲು ಯಡಿಯೂರಪ್ಪಗೆ ತಲೆ ಇಲ್ಲ, ಆಡಿದ್ದೇ ಆಟ. ಈ ರಾಜ್ಯದಲ್ಲಿ ಅತ್ಯಂತ ಹೀನಾಯ ಮುಖ್ಯಮಂತ್ರಿನಾ ಇಲ್ಲಿಯತನಕ ನೋಡಿರಲಿಲ್ಲ ಎಂದು ಕಿಡಿಕಾರಿದರು


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ