Breaking News

ರಮೇಶ್ ಜಾರಕಿಹೊಳಿ ಸಿಡಿ ಕೇಸ್ : ನಿರೀಕ್ಷಣಾ ಜಾಮೀನು ಕೋರಿ ಶಂಕಿತ ‘ಲಕ್ಷ್ಮೀಪತಿ’ ಅರ್ಜಿ

Spread the love

ಬೆಂಗಳೂರು : ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆ ಸಿಡಿ ಪ್ರಕರಣದಲ್ಲಿ, ದಿನೇಶ್ ಕಲ್ಲಹಳ್ಳಿಗೆ ಸಿಡಿ ತಲುಪಿಸಿದ್ದಂತ ಆರೋಪಿಯಾಗಿ ಲಕ್ಷ್ಮೀಪತಿ ಎಂದು ತಿಳಿದು ಬಂದಿತ್ತು. ಇಂತಹ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿರುವುದಾಗೇ, ಇದೀಗ ಆರೋಪಿ ಲಕ್ಷ್ಮೀಪತಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

 

ದಿನದಿಂದ ದಿನಕ್ಕೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಿರುವು ಪಡೆಯುತ್ತಿದೆ. ಒಂದೆಡೆ ಎಸ್‌ಐಟಿ ಆರೋಪಿಗಳ ಪತ್ತೆಗೆ ಗಾಳ ಹಾಕುತ್ತಿದ್ದರೇ, ಮತ್ತೊಂದೆಡೆ ತನಿಖೆಯನ್ನು ಕೂಡ ಚುರುಕುಗೊಳಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದಂತವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ವಿಚಾರಣೆ ನಡೆಸುತ್ತಿದೆ.

 

ಇಂತಹ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂಬುದಾಗಿ ಶಂಕಿತ ಭವಿತ್ ವೀಡಿಯೋ ಬಿಡುಗಡೆ ಮಾಡಿದ ನಂತ್ರ, ಎಸ್‌ಐಟಿ ತಂಡದ ಮುಂದೆ ವಿಚಾರಣೆಗೂ ಹಾಜರಾಗಿದ್ದರು. ಆದ್ರೇ ಮತ್ತೊಬ್ಬ ಶಂಕಿತ ನರೇಶ್ ತಾನು ಸದ್ಯಕ್ಕೆ ಎಸ್‌ಐಟಿ ತಂಡದ ಮುಂದೆ ತನಿಖೆಗೆ ಹಾಜರಾಗೋದಿಲ್ಲ ಎಂಬುದಾಗಿ ವೀಡಿಯೋದಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ, ಇಂದು ಇದೇ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಸಿಡಿ ತಲುಪಿಸಿದಂತ ಶಂಕಿತ ಲಕ್ಷ್ಮೀಪತಿ, ಎಸ್‌ಐಟಿ ತಂಡದ ಮುಂದೆ ವಿಚಾರಣೆಗೆ ಹಾಜರಾಗುವ ಮೊದಲೇ, ಅವರ ಪರ ವಕೀಲರ ಮೂಲಕ, ಬೆಂಗಳೂರು ಸೆಷನ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ