Breaking News

ಹೆಚ್‌ಡಿ ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿ ಧನ್ಯವಾದ ಹೇಳಿದ್ದೇಕೆ?

Spread the love

ಮೈಸೂರು: ಸಿಡಿ ಕೇಸ್ ಸಂಬಂಧ ಸ್ಪಷ್ಟನೆ ನೀಡಲು ಮಾರ್ಚ್ 09ರಂದು ತಮ್ಮ ಸದಾಶಿವನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಅವರು ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದ್ರೆ ಈ ರೀತಿ ಹೆಚ್​ಡಿಕೆಗೆ ಧನ್ಯವಾದ ಯಾಕೆ ಹೇಳಿದರು? ಸಿಡಿ ನಕಲಿ‌ ಎಂದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಯಾಕೆ ಕೊಟ್ರಿ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.

ಸಿಡಿ ರಿಲೀಸ್ ಆಗುತ್ತಿದ್ದಂತೆ ಹಲವು ನಾಯಕರು ಕರೆ ಮಾಡಿದ್ರು. ಎಲ್ಲಾ ಪಕ್ಷದ ನಾಯಕರೂ ನನ್ನ ಬೆನ್ನಿಗೆ ನಿಂತಿದ್ದಾರೆ. ನನ್ನ ಜತೆ ಮೊದಲು ಮಾತಾಡಿದ್ದು ಹೆಚ್​ಡಿ ಕುಮಾರಸ್ವಾಮಿ ಮತ್ತು ಹೆಚ್​ಡಿ ರೇವಣ್ಣ, ದೇವೇಗೌಡರ ಇಡೀ ಕುಟುಂಬವೇ ನನ್ನ ಜತೆ ಮಾತಾಡಿದೆ. ಸರ್ಕಾರ ಬೀಳಿಸಿದ ಸಿಟ್ಟಿದ್ದರೆ ನನ್ನ ಜತೆ ಏಕೆ ಮಾತಾಡ್ತಿದ್ರು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಕ್ತಾರ ಎಂ.ಲಕ್ಷ್ಮಣ್, ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.

ಸಿಡಿಯ ನಿರ್ದೇಶನ, ರಚನೆ ಬಿಜೆಪಿಯದ್ದು
CD ನಕಲಿ ಆದರೆ ಸಚಿವ ಸ್ಥಾನಕ್ಕೆ ರಮೇಶ್ ಏಕೆ ರಾಜೀನಾಮೆ ನೀಡಿದರು? ರಮೇಶ್ ಜಾರಕಿಹೊಳಿ ಹೆಚ್‌ಡಿಕೆಗೆ ಧನ್ಯವಾದ ಹೇಳಿದ್ರು. ಅದ್ಯಾಕೆ ಧನ್ಯವಾದ ಹೇಳಿದರು ಎಂದು ನನಗೆ ಗೊತ್ತಿಲ್ಲ. ಇದುವರೆಗೂ ನೀವು ಯಾಕೆ ದೂರು ನೀಡಲಿಲ್ಲ? ಈ‌ ಸಿಡಿಯ ನಿರ್ದೇಶನ, ರಚನೆ ಎಲ್ಲವೂ ಬಿಜೆಪಿಯದ್ದೆ. ಸಿ.ಪಿ.ಯೋಗೇಶ್ವರ್ ಕೇಳಿ ಸಿಡಿ ರಚನೆ ಹೇಗೆ ಮಾಡುತ್ತಾರೆ ಎಂದು ಅವರೇ ಮೈಸೂರಿನಲ್ಲಿ ಹೇಳಿದ್ದಾರೆ. ಅವರನ್ನೇ ಈ ಬಗ್ಗೆ ಕೇಳಿ. ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲಾ ಥರದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಅವರ ಎಲ್ಲಾ ಸಿಡಿಗಳು ಬಿಜೆಪಿ ಬಳಿ ಇವೆಯಂತೆ. ಅದರ ಆಧಾರದ ಮೇಲೆ ಇವರೆಲ್ಲರ ಜುಟ್ಟನ್ನು ಬಿಜೆಪಿ ಅವರು ಹಿಡಿದಿದ್ದಾರೆ. ನಳಿನ್ ಕುಮಾರ್ ಕಟೀಲ್ ಜೋಕರ್ ಥರ ಮಾತನಾಡುತ್ತಿದ್ದಾರೆ. ಒಳ್ಳೆದ್ದಕ್ಕೂ, ಕೆಟ್ಟದ್ದಕ್ಕೂ, ಮಕ್ಕಳಾಗಿದ್ದಕ್ಕೂ ಎಲ್ಲಕ್ಕೂ ಕಾಂಗ್ರೆಸ್ ಹೊಣೆ ಮಾಡುತ್ತೀರಾ ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ? ಎಂದು ಎಂ.ಲಕ್ಷ್ಮಣ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ 24 ಗಂಟೆಯಲ್ಲಿ ಈ‌ ಪ್ರಕರಣದ ಅಸಲಿ ಕಥೆಯನ್ನು ಪೊಲೀಸರು ಬಯಲಿಗೆ ತರುತ್ತಾರೆ. ಸಿ.ಪಿ.ಯೋಗೇಶ್ವರ್ ಬಳಿಯೇ ಸಿಡಿಗಳು ಇವೆ ಅಂತಾ ಹೇಳುತ್ತಾರೆ. ಬಾಂಬೆಗೆ ಹೋಗಿದ್ದವರು ಬೆತ್ತಲೆ ಬೆಲ್ಲಿ ಡ್ಯಾನ್ಸ್ ನೋಡಿದ್ದಾರೆ. ಆ ವಿಡಿಯೋಗಳು ಬಿಜೆಪಿ ಬಳಿ ಇವೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ