Breaking News

ಕೊರೊನಾ ತಡೆಗೆ ರೈತನಿಂದ ಒಂದು ಲಕ್ಷ ದೇಣಿಗೆ

Spread the love

ಹುಬ್ಬಳ್ಳಿ: ರೈತರೇ ನಿಜವಾದ ಅನ್ನದಾತರು. ತಮ್ಮ ಕಾಯಕದಲ್ಲಿ ಸದಾ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದರಲ್ಲೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ಇದೀಗ ಅಂತಹ ರೈತನೊಬ್ಬ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

ಧಾರವಾಡ ನಗರದ ಗುಲಗಂಜಿಕೊಪ್ಪ ನಿವಾಸಿ ಸದಾನಂದ ಶಿವಳ್ಳಿ ಅವರು ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಕೋವಿಡ್-19 ತಡೆ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ನೌಕರರು ಹಾಗೂ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ.

ಇವರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ. ಜಿಲ್ಲಾ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಕವಿವ ಸಂಘದ ಎಸ್.ಐ ಭಾವಿಕಟ್ಟಿ, ಮಾರ್ತಾಂಡಪ್ಪ ಎಂ ಕತ್ತಿ, ಅಧಿಕಾರಿಗಳಾದ ಜಿಲ್ಲಾ ಯೋಜನಾಧಿಕಾರಿ ದೀಪಕ್, ಲಕ್ಷಣ್ಣ ಬಕ್ಕಾಯಿ ಇದ್ದರು.


Spread the love

About Laxminews 24x7

Check Also

ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ

Spread the love ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಾದಿತ ಈದ್ಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ