Breaking News
Home / ರಾಜಕೀಯ / ಐಪಿಎಲ್ ಹರಾಜು 2021: 14.25 ಕೋಟಿ ರೂಗಳಿಗೆ ಆರ್ ಸಿಬಿ ಪಾಲಾದ ಗ್ಲೇನ್ ಮ್ಯಾಕ್ಸ್ ವೆಲ್, ದೆಹಲಿ ಪಾಲಾದ ಸ್ಟೀವ್ ಸ್ಮಿತ್!

ಐಪಿಎಲ್ ಹರಾಜು 2021: 14.25 ಕೋಟಿ ರೂಗಳಿಗೆ ಆರ್ ಸಿಬಿ ಪಾಲಾದ ಗ್ಲೇನ್ ಮ್ಯಾಕ್ಸ್ ವೆಲ್, ದೆಹಲಿ ಪಾಲಾದ ಸ್ಟೀವ್ ಸ್ಮಿತ್!

Spread the love

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಬರೊಬ್ಬರಿ 14.25 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಈ ನಿಮಿತ್ತ ಇಂದು ಆಟಗಾರರ ಹರಾಜು ಪ್ರಕ್ರಿಯೆ ಭರದಿಂದ ಸಾಗಿದೆ. ಚೆನ್ನೈನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ದೊಡ್ಡ ಪ್ರಮಾಣದ ಮೊತ್ತಕ್ಕೆ ಸೇಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮ್ಯಾಕ್ಸ್ ವೆಲ್ ರನ್ನು ಬರೊಬ್ಬರಿ14.25 ಕೋಟಿ ರೂಗಳಿಗೆ ಖರೀದಿ ಮಾಡಿದೆ. ಮ್ಯಾಕ್ಸ್ ವೆಲ್ ಮೂಲ ಬೆಲೆ 2 ಕೋಟಿ ರೂಗಳಾಗಿತ್ತು. ಆದರೆ ಮ್ಯಾಕ್ಸ್ ವೆಲ್ ಖರೀದಿಗಾಗಿ ಸಿಎಸ್ ಕೆ ಮತ್ತು ಕೆಕೆಆರ್ ತಂಡಗಳು ಭಾರಿ ಪೈಪೋಟಿ ನೀಡಿದ ಕಾರಣ ಅವರು ಮೂಲ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದಾರೆ ಎನ್ನಲಾಗಿದೆ.

ಅಂತೆಯೇ ಮತ್ತೋರ್ವ ಆಸಿಸ್ ಆಟಗಾರ ಸ್ಟೀವ್ ಸ್ಮಿತ್ 2.20 ಕೋಟಿ ರೂಗಳಿಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ರನ್ನು ಕೋಲ್ಕತಾ ತಂಡ 3.20 ಕೋಟಿ ರೂ ನೀಡಿ ಖರೀದಿ ಮಾಡಿದೆ. ಭಾರತದ ಉದಯೋನ್ಮುಖ ಆಟಗಾರ ಶಿವಂ ದುಬೆ 4.40 ಕೋಟಿ ರೂಗಳಿಗೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ. ಅಂತೆಯೇ ಇಂಗ್ಲೆಂಡ್ ತಂಡದ ಮೋಯಿನ್ ಅಲಿ 7 ಕೋಟಿ ರೂಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಉಳಿದಂತೆ ಭಾರತದ ಕುರಣ್ ನಾಯರ್, ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್, ವೆಸ್ಟ್ ಇಂಡೀಸ್ ತಂಡದ ಎವಿನ್ ಲೂಯಿಸ್, ಆಸಿಸ್ ಆಟಗಾರ ಆಯರಾನ್ ಫಿಂಚ್, ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಹನುಮವಿಹಾರಿ, ಆಲ್ರೌಂಡರ್ ಕೇದಾರ್ ಜಾದವ್, ಮಾರಾಟವಾಗದೇ ಉಳಿದಿದ್ದಾರೆ.

 

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ