Breaking News

ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ

Spread the love

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.

ಸಬ್ಸಿಡಿ ರಹಿತ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದೆ. ಎಲ್ ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ ಈವರೆಗೆ 722ರೂ ಇತ್ತು. ಇಂದು 772 ರೂಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಮೂರು ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿದೆ.

ಫೆ.4ರಂದು ಸಿಲಿಂಡರ್ ದರ 25 ರೂ ಏರಿಕೆಯಾಗಿತ್ತು. ಇದೀಗ ಏಕಾಏಕಿ 50 ರೂ ಹೆಚ್ಚಳವಾಗಿದೆ. ದೆಹಲಿ ಸಿಲಿಂಡರ್ ದರ 769 ರೂ ಇದ್ದರೆ ಕೋಲ್ಕತ್ತಾದಲ್ಲಿ 795 ರೂ, ಮುಂಬೈ 769 ರೂ., ಚೆನ್ನೈ 785 ರೂ ಆಗಿದೆ.


Spread the love

About Laxminews 24x7

Check Also

80ನೇ ಸ್ವಾತಂತ್ರ್ಯ ದಿನಾಚರಣೆ – ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಬೆಳಕಿನ ಅಲಂಕಾರ

Spread the loveವಿಜಯಪುರ: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ  ಬೆಳಕಿನ ಅಲಂಕಾರ ಮಾಡಲಾಗಿದೆ. 80ನೇ ಸ್ವಾತಂತ್ರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ