Breaking News

ನರ್ಸಿಂಗ್‌: ಸಿಗದ ಆನ್‌ಲೈನ್‌ ಅರ್ಜಿ, ‘ಸರ್ಕಾರಿ ಕೋಟ’ ವಿದ್ಯಾರ್ಥಿಗಳಿಗೆ ಅನ್ಯಾಯ!

Spread the love

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು ನರ್ಸಿಂಗ್‌ ಕೋರ್ಸ್‌ಗ ಳಿಗಾಗಿ ‘ಸರ್ಕಾರಿ ಕೋಟಾ’ದಡಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಜಿ ಸಲ್ಲಿಕೆಗೆ ಎರಡೇ ದಿನಗಳು ಬಾಕಿ ಉಳಿದಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (kea.kar.nic.in) ಆನ್‌ಲೈನ್‌ ಅರ್ಜಿ ನಮೂನೆ, ಮಾಹಿತಿ ಪತ್ರ ಸೇರಿ ಯಾವುದೂ ಲಭ್ಯವಿಲ್ಲ!

ಇದರಿಂದ ನರ್ಸಿಂಗ್‌ ಕೋರ್ಸ್‌ಗಳಿಗೆ ದಾಖಲಾಗಬೇಕು ಎಂದು ಬಯಸಿರುವ ರಾಜ್ಯದ ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿ ತಮ್ಮ ಅಳಲಿಗೆ ಕಿವಿಗೊಡುತ್ತಿಲ್ಲ ಎಂದು ವಿದ್ಯಾ
ರ್ಥಿಗಳು ದೂರಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ಫೆ.4 ರಂದು ಜಾಹೀರಾತು ಪ್ರಕಟಿಸಿತ್ತು. ಅರ್ಜಿ ಸಲ್ಲಿಕೆಗೆ ಫೆ. 11 ಕೊನೆಯ ದಿನ. ಆದರೆ, ಮಂಗಳವಾರ (ಫೆ.9) ಸಂಜೆವರೆಗೂ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ನಮೂನೆ, ಮಾಹಿತಿ ಪತ್ರಗಳನ್ನು ಅಪ್‌ ಲೋಡ್‌ ಮಾಡಿಲ್ಲ. ‘ಜಾಹೀ
ರಾತು ಪ್ರಕಟಿಸಿ 5 ದಿನಗಳ ಕಳೆದರೂ ಮಾಹಿತಿ ನೀಡದೇ ಇರುವುದನ್ನು ನೋಡಿದರೆ ಖಾಸಗಿ ಕಾಲೇಜು ಗಳು ಕೇರಳ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹಣ ಕ್ಕಾಗಿ ಸೀಟುಗಳನ್ನು ಮಾರಿ ಕೊಳ್ಳಲು ಪ್ರಾಧಿಕಾರದ ಅಧಿಕಾರಿ ಗಳು ನೆರವಾಗುತ್ತಿದ್ದಾರೆಯೇ ಎಂಬ ಸಂಶಯ ಉಂಟಾಗಿದೆ’ ಎಂದು ವಿದ್ಯಾ ರ್ಥಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ವೈಷ್ಣೋದೇವಿ ಯಾತ್ರೆಗೂ ಸರ್ಕಾರದಿಂದ ಸಹಾಯ ಧನ: ರಾಮಲಿಂಗಾರೆಡ್ಡಿ

Spread the loveಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ  ಭೇಟಿ ನೀಡುವ ಯಾತ್ರಿಗಳಿಗೆ ತಲಾ 5 ಸಾವಿರ ಸಹಾಯಧನ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ