Breaking News

ಎಲ್‌ಪಿಜಿ ದರ 25 ರೂ. ಏರಿಕೆ : ಪೆಟ್ರೋಲ್‌, ಡೀಸೆಲ್‌ ಪ್ರತೀ ಲೀ.ಗೆ 35 ಪೈಸೆ ತುಟ್ಟಿ

Spread the love

ಹೊಸದಿಲ್ಲಿ: ಸರಕಾರಿ ತೈಲ ಮಾರಾಟ ಸಂಸ್ಥೆ (ಒಎಂಸಿ)ಗಳು ದೇಶಾದ್ಯಂತ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 25 ರೂ. ಏರಿಸಿದ್ದು, ಗುರುವಾರದಿಂದಲೇ ಪರಿಷ್ಕೃತ ದರ ಜಾರಿಗೊಂಡಿದೆ.

ದಿಲ್ಲಿಯಲ್ಲಿ ಸಿಲಿಂಡರ್‌ಗೆ (14.2 ಕೆಜಿ) 694 ರೂ. ಬದಲಾಗಿ 719 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 697 ರೂ. ಇದ್ದ ಗ್ಯಾಸ್‌ ಸಿಲಿಂಡರ್‌ ಬೆಲೆ 722 ರೂ. ತಲುಪಿದೆ. ಮುಂಬಯಿಯಲ್ಲಿ 719 ರೂ., ಚೆನ್ನೈಯಲ್ಲಿ 735 ರೂ.ವರೆಗೆ ಏರಿಕೆಯಾಗಿದೆ.

ಗ್ಯಾಸ್‌ ಸಿಲಿಂಡರ್‌ಗಳ ದರ ಏರಿಕೆ ಮುಖ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಎಲ್‌ಪಿಜಿ ದರ ಮಾನದಂಡ, ಡಾಲರ್‌ ಮತ್ತು ರೂಪಾಯಿ ನಡುವಿನ ವಿನಿಮಯ ದರಗಳನ್ನು ಅವಲಂಬಿಸಿದೆ.

ಪೆಟ್ರೋಲ್‌-ಡೀಸೆಲ್‌ ಏರಿಕೆ
7 ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡಿದ್ದ ಪೆಟ್ರೋಲ್‌- ಡೀಸೆಲ್‌ ಬೆಲೆ ಗುರುವಾರ ಮತ್ತೆ ಪ್ರತೀ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀ.ಗೆ 86.30 ರೂ.ಗಳಿಂದ 86.65 ರೂ.ಗಳಿಗೆ ಏರಿಕೆಯಾಗಿದೆ. ಡೀಸೆಲ್‌ ಬೆಲೆ 76.83ಗಳಿಗೇರಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ