Breaking News

ಸುಶಾಂತ್ ಸಿಂಗ್ ಸಂಬಂಧಿಯ ಮೇಲೆ ಗುಂಡಿನ ದಾಳಿ

Spread the love

ಕಳೆದ ವರ್ಷ ನಿಧನವಾದ ನಟ ಸುಶಾಂತ್ ಸಿಂಗ್ ಸಂಬಂಧಿ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾನೆ.

ಸುಶಾಂತ್ ಸಿಂಗ್ ತಾಯಿಯ ಸಹೋದರನಾಗಿರುವ ರಾಜಕುಮಾರ್ ಸಿಂಗ್ ಮೇಲೆ ಮೂವರು ಅಗಂತುಕರು ನಿನ್ನೆ (ಜನವರಿ 30) ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ರಾಜಕುಮಾರ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರದ ಸಹರ್ಸಾ ನಲ್ಲಿ ವಾಸವಾಗಿರುವ ರಾಜಕುಮಾರ್ ಸಿಂಗ್ ಗೆ ಮೂರು ವಾಹನ ಶೋ ರೂಂ ಇದ್ದು. ಮೂರೂ ಶೋ ರೂಂ ಗೆ ಪ್ರತಿದಿನ ಭೇಟಿ ಮಾಡುತ್ತಾರೆ. ಅಂತೆಯೇ ನಿನ್ನೆ ಸಹ ಶೋ ರೂಂ ಗೆ ಹೋಗಬೇಕಾದರೆ ಸಹರ್ಸಾ ಕಾಜೇಲು ಬಳಿಯ ಶೋ ರೂಂ ಮುಂದೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ರಾಜ್‌ಕುಮಾರ್ ಕಾರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ರಾಜ್‌ಕುಮಾರ್ ಸಿಂಗ್‌ನ ನೌಕರಾಗಿದ್ದ ಅಲಿ ಹಸನ್ ಗೂ ಗುಂಡೇಟು ತಗುಲಿದೆ.

ನಟ ಸುಶಾಂತ್ ಸಿಂಗ್‌ ರ ತಾಯಿಯ ಸಹೋದರ ಈ ರಾಜ್‌ಕುಮಾರ್ ಸಿಂಗ್ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೊಂದು ದೊರಕಿದೆ, ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದಿದ್ದಾರೆ ಸ್ಥಳೀಯ ಪೊಲೀಸ್ ಅಧಿಕಾರಿ.

ನಟ ಸುಶಾಂತ್ ಸಿಂಗ್ ಕಳೆದ ವರ್ಷ ಮುಂಬೈ ನಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ