Breaking News

ದರೋಡೆಗೆ ಹೋದ ಮನೆಯಲ್ಲಿ ಸೇಬು ತಿಂದು ಸಿಕ್ಕಿಬಿತ್ತು ಕಳ್ಳರ ಗ್ಯಾಂಗ್!

Spread the love

ಬೆಂಗಳೂರು (ಜ. 28): ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕುತ್ತಿದ್ದ ಆ ಗ್ಯಾಂಗ್ ದೊಡ್ಡ ದೊಡ್ಡ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿತ್ತು. ಅವರು ಇಟ್ಟ ಗುರಿ ಯಾವತ್ತೂ ಮಿಸ್ ಆಗೇ ಇಲ್ಲ. ಆ ಗ್ಯಾಂಗ್‌ನ ಲೀಡರ್ ಮಾಡಿರೋ ಕೃತ್ಯಗಳು ಒಂದೆರಡಲ್ಲ. ಬರೋಬ್ಬರಿ 50ಕ್ಕೂ ಹೆಚ್ಚು ಪ್ಲಾನ್‌ ಮಾಡುತ್ತಿದ್ದ ಆ ಗ್ಯಾಂಗ್ ಕಂಬಿಯ ಹಿಂದೆ ಹೋಗಿದೆ. ಆ ಕಳ್ಳರ ಗ್ಯಾಂಗನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಕದಿಯಲು ಹೋದ ಮನೆಯ ಅಡುಗೆ ಮನೆಯಲ್ಲಿ ಸೇಬು ಹಣ್ಣು ತಿನ್ನುತ್ತಾ ಕುಳಿತಿದ್ದ ಕಳ್ಳಿಯನ್ನು ಮನೆಯ ಮಾಲೀಕರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಹೂ ಬೇಕಾ ಹೂವ ಎಂದು ಕೂಗುತ್ತಾ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳು ಒಂದು ಬಿಗ್ ಸ್ಕೆಚ್ ಹಾಕುತ್ತಿದ್ದಳು. ಹೂ ಮಾರೋ ನೆಪದಲ್ಲಿ ಮನೆಗಳ್ಳತನ ಮಾಡಲು ಈ ಲೇಡಿ ಖದೀಮರಿಗೆ ಸಹಾಯ ಮಾಡುತ್ತಿದ್ದಳು. ಇದೇ ತಿಂಗಳ 14ನೇ  ತಾರೀಕಿನಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿ ರವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಕಲ್ಯಾಣಿ ಹಾಗೂ ಬಸವರಾಜು, ಬೆಂಗಳೂರಿನ ಬನಶಂಕರಿ ಮೂಲದ ಶಿವಾನಂದ ಹಾಗೂ ಉಷಾ ಬಂಧಿತ ಆರೋಪಿಗಳು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ