Breaking News

ಮಾವನ ಮೇಲಿನ ಸಿಟ್ಟಿಗೆ ಜಗತ್ತು ನೋಡದ ಮಗುವಿನ ಜೊತೆ ಮಸಣ ಸೇರಿದ್ದಾಳೆ.

Spread the love

ಮೈಸೂರು; ಆಕೆ ಕಳೆದ ಐದು ತಿಂಗಳ ಹಿಂದೆ ಪೊಲೀಸ್ ಹುದ್ದೆಯಲ್ಲಿದ್ದವರನ್ನು ಮದುವೆಯಾಗಿದ್ದಳು. ಜೀವನ ಪೂರ್ತಿ ಕೆಲಸದ ಭದ್ರತೆ ಇರುತ್ತೆ, ಮನೆ ಮಂದಿ ಜೊತೆ ನೆಮ್ಮದಿಯಿಂದ ಇರಬಹುದು ಎಂದು ಊಹಿಸಿಕೊಂಡಿದ್ದ ಆಕೆ ಗಂಡನ ಜೊತೆ ಸುಖವಾಗಿಯೇ ಇದ್ದಳು. ಆಕೆ‌ ಮೂರು ತಿಂಗಳ ಗರ್ಭಿಣಿ ಸಹ ಆಗಿ ಇನ್ನೆನು ಪುಟ್ಟ ಮಗುವಿಗೆ ಜನ್ಮ ನೀಡುವವಳಿದ್ದಳು. ಆದರೆ ಆಕೆಗೆ ತಾನು ಬಯಸಿದ ಒಂದು ಸುಖ ಸಿಗಲೇ ಇಲ್ಲದಂತಾಗಿತ್ತು.

ತನ್ನ ಹೆತ್ತವರನ್ನ ಬಿಟ್ಟ, ಗಂಡನ ಮನೆಗೆ ಬಂದಿದ್ದ ಆಕೆಯನ್ನ ತನ್ನ ಮಾವ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ತನ್ನನ್ನು ದ್ವೇಷಿಸುತ್ತಿದ್ದ ಮಾವನ ಮೇಲೆ ಗಂಡನಿಗೆ ಪತ್ರವೊಂದನ್ನು ಬರೆದು ಆಕೆ ನೇಣಿಗೆ ಕೊರಳೊಡ್ಡಿದ್ದಾಳೆ. ಮಾವನ ಮೇಲಿನ ಸಿಟ್ಟಿಗೆ ಜಗತ್ತು ನೋಡದ ಮಗುವಿನ ಜೊತೆ ಮಸಣ ಸೇರಿದ್ದಾಳೆ.


Spread the love

About Laxminews 24x7

Check Also

ಮತದಾರರ ಪಟ್ಟಿ ಪರಿಷ್ಕರಣೆಗೆ ಎಲ್ಲರೂ ಸಹಕರಿಸಿ: ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ವೀರಣ್ಣ ಚರಂತಿಮಠ

Spread the loveಬಾಗಲಕೋಟೆ: ಪ್ರತಿಯೊಬ್ಬರೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ