Breaking News

ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್

Spread the love

ಬೆಂಗಳೂರು,ಜನವರಿ 22: ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್ ಪಡೆಯಿರಿ ಎಂದು ಬಿಎಂಟಿಸಿ ಹೇಳಿದೆ.

ಪ್ರಸಕ್ತ ಸಾಲಿನ ವಿದ್ಯಾರ್ಥಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಜನವರಿ 31 ಅಂತಿಮ ದಿನಾಂಕವಾಗಿದೆ. ಕೊರೊನಾ ಲಾಕ್‌ಡೌನ್ ಮುಗಿದು ಶಾಲೆ, ಕಾಲೇಜುಗಳ ಆರಂಭವಾದ ಕೆಲವು ದಿನಗಳು ಕಳೆದ ವರ್ಷದ ಬಿಎಂಟಿಸಿ ಬಸ್‌ ಪಾಸ್ ಅಥವಾ ಕಾಲೇಜಿನ ಶುಲ್ಕ ರಶೀದಿ ಅಥವಾ ಕಾಲೇಜು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಹೇಳಿತ್ತು.

ಇದೀಗ ಆನ್‌ಲೈನ್ ಮೂಲಕ ಬಸ್ ಪಾಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.ಹಳೆಯ ಬಿಎಂಟಿಸಿ ಬಸ್‌ಗಳನ್ನು ಗುಜರಿಗೆ ಹಾಕದೆ ಅದನ್ನು ಮೊಬೈಲ್ ಸ್ಕೂಲ್‌ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ.

ಹೇಗೆ ಮೊಬೈಲ್ ಎಟಿಎಂ ನಿಮ್ಮ ಬಳಿಗೆ ಹಣವನ್ನು ಹೊತ್ತು ಬರುವುದೇ ಹಾಗೆಯೇ ಈ ಮೊಬೈಲ್ ಸ್ಕೂಲ್‌ಗಳು ನಿಮ್ಮ ಬಳಿಗೆ ವಿದ್ಯೆಯನ್ನು ಹೊತ್ತು ಬರಲಿವೆ.

ಕೊರೊನಾ ಬಳಿಕ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ, ಬಡ ಮಕ್ಕಳು ಕೂಲಿ ಮಾಡಿಕೊಂಡು ಪೋಷಕರಿಗೆ ನೆರವಾಗುತ್ತಿದ್ದಾರೆ.ಶಾಲೆಯನ್ನು ದಾಖಲಾಗಿರುವ ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಬಿಬಿಎಂಪಿಯು ಹಳೆಯ ಬಸ್‌ಗಳನ್ನು ಮೊಬೈಲ್ ಸ್ಕೂಲ್‌ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಶಾಲೆಯಿಂದ ವಂಚಿತರಾದ ಮಕ್ಕಳ ಕುರಿತು ಬಿಬಿಎಂಪಿಯು ಸಮೀಕ್ಷೆ ನಡೆಸಿತ್ತು. ಬಿಬಿಎಂಪಿಯು ಬಿಎಂಟಿಸಿಯಿಂದ 10 ಬಸ್‌ಗಳನ್ನು ನೀಡುವಂತೆ ಕೇಳಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ