Breaking News

“ಮದುವೆಯಾಗುವುದಾಗಿ ನಂಬಿಸಿ ರೇಪ್ ಮಾಡಿದ್ದಾನೆ” : ಪೈಲಟ್ ವಿರುದ್ ನಟಿ ದೂರು

Spread the love

ಮುಂಬೈ, ಜ.19- ವೃತ್ತಿಪರ ಪೈಲಟ್ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಮೋಸಗೊಳಿಸಿದ್ದಾನೆ ಎಂದು ಹಿಂದಿ ಕಿರುತೆರೆ ನಟಿ ಮತ್ತು ಮಾಡೆಲ್ ಪೊಲೀಸರಿಗೆ ದೂರು ನೀಡಿರುವ ಘಟನೆ ಇಲ್ಲಿ ನಡೆದಿದೆ. ಆಕೆ ಸಲ್ಲಿಸಿರುವ ದೂರಿನ ಮೇರೆಗೆ ಓಶಿವಾರ ಪೊಲೀಸರು ಆರೋಪಿ ಪೈಲಟ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಆರೋಪಿಯನ್ನು ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ.

ಆರೋಪಿ ವೃತ್ತಿಪರ ಪೈಲಟ್ ಎಂದು ಹೇಳಿಕೊಂಡು ಈಕೆ ಸಂಬಂಧ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಭೋಪಾಲ್ ನಿವಾಸಿಯಾದ ಪೈಲಟ್ ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದು, ಆಕೆಯೊಡನೆ ನಿರಂತರ ಫೋನ್ ಹಾಗೂ ಸಾಮಾಜಿಕ ತಾಣಗಳಲ್ಲಿ ಭೇಟಿಯಾಗುತ್ತಿದ್ದ ತನಿಖೆಯಲ್ಲಿ ತಿಳಿದುಬಂದಿದೆ.

ಕಳೆದ 10 ದಿನಗಳ ಹಿಂದೆ ಸಂತ್ರಸ್ತೆ ನಟಿಗೆ ಫೋನ್ ಮಾಡಿ ಆಕೆಯ ಮನೆಯಲ್ಲಿ ಭೇಟಿಯಾಗಲು ಇಚ್ಛಿಸಿದ್ದಾನೆ. ಅದರಂತೆ ಆಕೆ ಆರೋಪಿಯನ್ನು ಮನೆಗೆ ಕರೆದಿದ್ದಾಳೆ. ಆಕೆ ಮನೆಯಲ್ಲಿ ಒಬ್ಬಂಟಿ ವಾಸಿಸುತ್ತಿದ್ದ ಅವಕಾಶ ಉಪಯೋಗಿಸಿಕೊಂಡು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಆಕೆಯನ್ನು ಸಮಾಧಾನಪಡಿಸಿ ಪೈಲಟ್ ತನ್ನ ಫೋಷಕರಿಗೆ ಪರಿಚಯಿಸುವುದಾಗಿಯೂ ಹಾಗೂ ಶೀಘ್ರ ವಿವಾಹವಾಗುವುದಾಗಿ ನಂಬಿಸಿ, ಕೈಕೊಟ್ಟಿದ್ದಾನೆ. ಆತ ನೀಡಿದ ಮಾತನ್ನು ಉಳಿಸಿಕೊಳ್ಳದೆ ತಿರುಗಾಡುತ್ತಿದ್ದರಿಂದ ನಟಿ ಸಮೀಪದ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ