Breaking News

ಸಿಆರ್‌ಪಿಎಫ್‌ಗೆ ಡಿಅರ್‌ಡಿಒ ಅಭಿವೃದ್ಧಿಪಡಿಸಿದ 21 ಬೈಕ್‌ ಆಯಂಬುಲೆನ್ಸ್‌

Spread the love

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 21 ಬೈಕ್‌ ಆಂಬುಲೆನ್ಸ್‌ಗಳನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ (ಸಿಆರ್‌ಪಿಎಫ್‌) ಸೋಮವಾರ ಹಸ್ತಾಂತರಿಸಲಾಯಿತು.

ನಕ್ಸಲ್‌ ಪೀಡಿತ ಮತ್ತು ಹಿಂಸಾಚಾರ ಪ್ರದೇಶಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲು ಮತ್ತು ಆಸ್ಪತ್ರೆಗೆ ದಾಖಲಿಸಲು ಈ ಬೈಕ್‌ ಆಂಬುಲೆನ್ಸ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ.

‘ರಕ್ಷಿತಾ’ ಹೆಸರಿನಲ್ಲಿ 350 ಸಿಸಿ ರಾಯಲ್‌ ಎನ್‌ಫಿಲ್ಡ್‌ ಕ್ಲಾಸಿಕ್‌ ಬೈಕ್‌ನಲ್ಲಿ ಡಿಆರ್‌ಡಿಒದ ವೈಜ್ಞಾನಿಕ ಸಂಶೋಧಗೆ ಸಂಬಂಧಿಸಿದ ‘ಅಣು ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ’ (ಐಎನ್‍ಎಂಎಎಸ್) ಈ ಆಂಬುಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಿದೆ.

ಸಿಆರ್‌ಪಿಎಫ್‌ ನಿಯೋಜಿಸಿರುವ ಸ್ಥಳದಲ್ಲೂ ಸ್ಥಳೀಯರಿಗೆ ನೆರವಾಗಲು ಸಹ ಈ ಬೈಕ್‌ ಆಂಬುಲೆನ್ಸ್‌ಗಳನ್ನು ಬಳಸಲಾಗುವುದು ಎಂದು ಸಿಆರ್‌ಪಿಎಫ್‌ ಮುಖ್ಯಸ್ಥ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.

ಈ ಯೋಜನೆಗೆ ₹35.49 ಲಕ್ಷ ವೆಚ್ಚ ಮಾಡಲಾಗಿದೆ. ಬೈಕ್‌ ಆಂಬುಲೆನ್ಸ್‌ನಲ್ಲಿ ಅಮ್ಲಜನಕದ ಕಿಟ್‌ ಅಳವಡಿಸಲಾಗಿದೆ ಎಂದು ಸಿಆರ್‌ಪಿಎಫ್‌ ವಕ್ತಾರರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ