Breaking News
Home / ರಾಜ್ಯ / ಐಸ್ ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಸೋಂಕು ಪತ್ತೆ

ಐಸ್ ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಸೋಂಕು ಪತ್ತೆ

Spread the love

ಬೀಜಿಂಗ್: ಐಸ್ ಕ್ರೀಂ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಐಸ್ ಕ್ರೀಂ ತಿಂದ ಸಾವಿರಾರು ಜನರು ಆತಂಕಕ್ಕೀಡಾಗಿರುವ ಘಟನೆ ಚೀನಾದ ಟಿಯಾಂಜಿನ್ ಪ್ರದೇಶದಲ್ಲಿ ನಡೆದಿದೆ.

ಡಕಿಯಾವಾಡು ಫುಡ್ ಕಂಪನಿ ತಯಾರಿಸಿದ್ದ ಐಸ್ ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸ್ಥಳೀಯಾಡಳಿತ ಅಧಿಕಾರಿಗಳು ಐಸ್ ಕ್ರೀಂ ಕಂಪನಿಗೆ ಬೀಗ ಹಾಕಿದ್ದು, ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.

ಕಂಪನಿಯ 1600 ಉದ್ಯೋಗಿಗಳ ಪೈಕಿ 600 ಸಿಬ್ಬಂದಿಗಳ ಕೊವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ ಐಸ್ ಕ್ರೀಂ ನಿಂದಾಗಿಯೇ ಕೊರೊನಾ ಸೋಂಕು ಬಂದಿದೆಯೇ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಆದರೆ 29 ಸಾವಿರ ಐಸ್ ಕ್ರೀಂ ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ