Breaking News

23 ದಿನದ ಹಸುಗೂಸನ್ನೇ ಒಲೆಗೆ ಹಾಕಿ ಸುಟ್ಟು ಹಾಕಿದ ತಾಯಿ…..

Spread the love

ಚಿಕ್ಕಮಗಳೂರು:   ತನ್ನ 23 ದಿನದ ಹೆಣ್ಣುಮಗುವನ್ನು ತಾಯಿಯೇ ಒಲೆಯಲ್ಲಿ ಹಾಕಿ ಹುಟ್ಟು ಹಾಕಿದ ಅಮಾನವೀಯ ಘಟನೆ ಕಡೂರು ತಾಲೂಕಿನ ಕೆರೆ ಸಂತೆ ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಚಂದ್ರಾಬಾಯಿ ಎಂದು ಗುರುತಿಸಲಾಗಿದೆ. ರಮೇಶ್ ನಾಯ್ಕ ಎಂಬಾತನ ಪತ್ನಿ. ಈ ದಂಪತಿಗೆ ಮಾಚ್. 2 ರಂದು ಹೆಣ್ಣು ಮಗು ಜನಿಸಿತ್ತು. ಆಕೆಗೆ ಹೆಣ್ಣು ಮಗು ಬೇಕಿರಲಿಲ್ಲ.  ಹೀಗಾಗಿ ಮಾ.21 ರಂದು ಮಗುವನ್ನು ಒಲೆಗೆ ಹಾಕಿ  ಸುಟ್ಟು ಹಾಕಿದ್ದಳು. ಬಳಿಕ ಮಗುವನ್ನು ನಾಯಿ ಎತ್ತಿಕೊಂಡು ಹೋಗಿದೆ ಎಂದು ಸುದ್ದಿ ಹಬ್ಬಿಸಿದ್ದಳು.

ಪೊಲೀಸ್ ತನಿಖೆ ವೇಳೆ ನಿಜಾಂಶ ಹೊರ ಬಂದಿದೆ. ಈ ಮಹಿಳೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು,  ಕೆಲ ದಿನಗಳ ಹಿಂದಷ್ಟೇ ಖುಲಾಸೆಯಾಗಿದ್ದಳು ಎಂದು ತಿಳಿದು ಬಂದಿದೆ.

ಕಡೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ