Breaking News

ಬಿಗ್ ಬಾಸ್-8 ಸೀಸನ್ ಯಾವಾಗ ಪ್ರಾರಂಭ ಗೊತ್ತಾ..?

Spread the love

ಸಿನಿಮಾ ಡೆಸ್ಕ್ : ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ 7 ಸೀಸನ್ ಗಳನ್ನು ಮುಗಿಸಿ ಇದೀಗ 8 ನೇ ಸೀಸನ್ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.

ಬಿಗ್ ಬಾಸ್ ನ ಮೊದಲ ಸೀಸನ್ ನಿಂದಲೂ ನಿರೂಪಣೆ ಜವಾಬ್ದಾರಿ ಹೊತ್ತ ಕಿಚ್ಚ ಸುದೀಪ್ ಯಶಸ್ವಿಯಾಗಿ ಏಳು ಸೀಸನ್ ಪೂರೈಸಿದ್ದಾರೆ. ಇದೀಗ ಮತ್ತೆ ಸೀಸನ್ 8 ನ್ನು ಹೋಸ್ಟ್ ಮಾಡಲು ಕಿಚ್ಚ ಬರುತ್ತಿದ್ದಾರೆ. ಇನ್ನೂ, ಇದೀಗ ಬಿಗ್ ಬಾಸ್ ಸೀಸನ್ 8 ಗೆ ಮಹೂರ್ತ ಫಿಕ್ಸ್ ಆಗಿದೆ.

 

ಕೊನೆಗೂ ಬಿಗ್ ಬಾಸ್ -8 ಪ್ರಾರಂಭವಾಗಲಿದ್ದು, ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದೀಗ ಬಿಗ್ ಬಾಸ್ -8 ಯಾವಾಗ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ರಿವೀಲ್ ಆಗಿದ್ದು, ಜನವರಿ ಮೂರನೇ ಅಥವಾ ಕೊನೆಯ ವಾರದಿಂದ ಬಿಗ್ ಬಾಸ್-8 ಸೀಸನ್ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಬಿಗ್ ಬಾಸ್ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ