Breaking News

ಸಾಮಾಜಿಕ ಜಾಲತಾಣದಲ್ಲಿ ನಾಡಧ್ವಜ ಅಭಿಯಾನಕ್ಕೆ ಭರ್ಜರಿ ಬೆಂಬಲ.!

Spread the love

ಬೆಳಗಾವಿ(ಡಿಸೆಂಬರ್​. ಮಹಾನಗರ ಪಾಲಿಕೆ ಮುಂದೆ ಕನ್ನಡ ಬಾವುಟ ಹಾರಾಟ ವಿಚಾರ ಈಗ ದೇಶ್ಯಾದ್ಯಂತ ಚರ್ಚೆ ಗೆ ಕಾರಣವಾಗಿದೆ. ಕನ್ನಡದ ಕಟ್ಟಾಳುಗಳು ದಶಕಗಳ ಕನ್ನಡಿಗರ ಕನಸನ್ನು ಸಾಕಾರಗೊಳಿಸಿದ್ದಾರೆ. ಹೀಗಿರುವಾಗ ನಾಡದ್ರೋಹಿಗಳು ಬೆಳಗಾವಿ ಪಾಲಿಕೆ ಮುಂದಿನ ಹಳದಿ ಕೆಂಪು ಧ್ವಜ ತೆರವು ಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು‌. ಎಂಇಎಸ್ ಪುಂಡರು ಒನ್ ನೇಷನ್ಸ್ ಒನ್ ಫ್ಲ್ಯಾಗ್ ಅಭಿಯಾನಕ್ಕೆ ಟ್ವಿಟರ್ ಅಭಿಯಾನಕ್ಕೆ ಈಗ ಕನ್ನಡಿಗರು ಗುದ್ದು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಅಭಿಯಾನಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. 

ಬೆಳಗಾವಿ ಫೇಸ್‌ಬುಕ್‌ ಪುಟ ತಂಡದ ಕಿರಣ ಮಾಳನ್ನವರ ನೇತೃತ್ವದಲ್ಲಿ ಟ್ವಿಟರ್ ಅಭಿಯಾನ ಆರಂಭಿಸಿದರು. ನಮ್ಮ ಬೆಳಗಾವಿ ನಮ್ಮ ಬಾವುಟ ಟ್ವಿಟರ್ ಅಭಿಯಾನದಲ್ಲಿ ದೇಶದಲ್ಲಿಯೇ ಟಾಪ್ 3 ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ.ಷ್ಡೇ ಅಲ್ಲದೇ ಟ್ವಿಟರ್ ಅಭಿಯಾನಕ್ಕೆ ಶಾಸಕರು, ಸೆಲೆಬ್ರಿಟಿ ಗಳು, ಕನ್ನಡ ಹೋರಾಟಗಾರರು ಸಾಥ್ ನೀಡಿದ್ದಾರೆ ಶಾಸಕಿ ಸೌಮ್ಯಾ ರೆಡ್ಡಿ, ನಿರ್ದೇಶಕರು, ಕಾಮಿಡಿ ಕಲಾವಿದರು ಬೆಂಬಲಿಸಿದ್ದಾರೆ. ಈ ನಮ್ಮಬೆಳಗಾವಿ ನಮ್ಮ ಬಾವುಟ ಟ್ವಿಟರ್ ಅಭಿಯಾನ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯವನ್ನ ಕನ್ನಡಿಗರು ಮಾಡಿದ್ದಾರೆ.

 


Spread the love

About Laxminews 24x7

Check Also

ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಬೆಳಗಾವಿ ಸೇರಿದಂತೆ 6 ಕಡೆ ದಾಳಿ

Spread the loveಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯ ಮನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ