Breaking News

ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತ

Spread the love

ನವದೆಹಲಿ : ದೇಶೀಯ ಧ್ವನಿ ಕರೆಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ವಿಧಿಸುತ್ತಿದ್ದಂತ ಇಂಟರ್ ಕನೆಕ್ಟ್ ಬಳಕೆ ಶುಲ್ಕ ಜನವರಿ 1, 2021ಕ್ಕೆ ಕೊನೆಗೊಳ್ಳಲಿದೆ. ಇದರಿಂದಾಗಿ ಐಸಿಯು ಶುಲ್ಕ ರದ್ದುಗೊಳ್ಳುವ ಕಾರಣದಿಂದಾಗಿ, ಜನವರಿ 1, 2021ರಿಂದ ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಯೋ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಬಿಲ್ ಅಂಡ್ ಕೀಫ್ ನಿಯಮ 2021ರ ಜನವರಿ 1ರಿಂದ ದೇಶದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ದೇಶೀಯ ಧ್ವನಿ ಕರೆಗಳಿಗೆ ಇಂಟರ್ ಕನೆಕ್ಟ್ ಬಳಕೆ ಶುಲ್ಕ (ಐಯುಸಿ) ಕೊನೆಗೊಳ್ಳಲಿದೆ. ಐಯುಸಿ ಶುಲ್ಕ ಗಳನ್ನು ರದ್ದುಗೊಳಿಸಿದ ಕೂಡಲೇ ಜಿಯೋ ಮತ್ತೊಮ್ಮೆ ಆಫ್ ನೆಟ್ ದೇಶೀಯ ವಾಯ್ಸ್ ಕರೆಗಳನ್ನು ಶೂನ್ಯಕ್ಕೆ ಹಿಂತಿರುಗಿಸುವ ತನ್ನ ಬದ್ಧತೆಯನ್ನು ಗೌರವಿಸಿ, ಜನವರಿ 1, 2021ರಿಂದ ಜಿಯೋ ಮತ್ತೊಮ್ಮೆ ಆಫ್-ನೆಟ್ ದೇಶೀಯ ವಾಯ್ಸ್ ಕರೆಗಳನ್ನು ಉಚಿತಗೊಳಿಸಲಿದೆ


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ