Breaking News

ರಾಜ್ಯದಲ್ಲಿ ಹೆಚ್ಚಿನ ಚಳಿಯಿದೆ. ಜಾಕೆಟ್, ಸ್ವೆಟರ್ ಹಾಕಿದರೂ ಚಳಿ ಕಡಿಮೆಯಾಗುತ್ತಿಲ್ಲ.

Spread the love

(ಡಿಸೆಂಬರ್​ 23): ಸಿಲಿಕಾನ್ ಸಿಟಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಚಳಿಯಿದೆ. ಕಳೆದ‌ ಹದಿನೈದು ದಿನಗಳ ಹಿಂದೆ ಚಂಡಮಾರುತ ಕಾರಣದಿಂದ ಚಳಿ ಹೆಚ್ಚಿತ್ತು. ಇದೀಗ ಚಂಡಮಾರುತದಿಂದಲ್ಲದೇ ಹೋದರೂ ಚಳಿಗಾಲಕ್ಕೆ ಚಳಿಯಿದೆ ಎಂದುಕೊಳ್ಳುವವರಿದ್ದಾರೆ‌‌. ಆದರೆ, ಕಳೆದ ವರುಷಕ್ಕೆ ಹೋಲಿಸಿದರಲ್ಲಿ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಚಳಿಯಿದೆ. ಜಾಕೆಟ್, ಸ್ವೆಟರ್ ಹಾಕಿದರೂ ಚಳಿ ಕಡಿಮೆಯಾಗುತ್ತಿಲ್ಲ. ಕಳೆದೊಂದು ವಾರದಿಂದ ಅತಿಯಾದ ಚಳಿಯಿದ್ದು, ಬೆಳಗ್ಗೆ ಹಾಗೂ ರಾತ್ರಿ ವೇಳೆ‌ ಇನ್ನಷ್ಟು ಹೆಚ್ಚಿದೆ. ನಿಮ್ಮೆ ಮಂಗಳವಾರ ಬೆಂಗಳೂರಿನ ಹೆಚ್​ಎಎಲ್​​ ಬಳಿ ಕನಿಷ್ಠ 12 ತಾಪಮಾನ ದಾಖಲಾಗಿದೆ. ಮೊನ್ನೆ ಇದೇ ಸ್ಥಳದಲ್ಲಿ ತಾಪಮಾನ 13 ಇತ್ತು. ಉಳಿದಂತೆ ಬೆಂಗಳೂರು ನಗರದ ಇತರಡೆ 14 ರಿಂದ 18 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗಿದೆ. ಇದು ಜನವರಿ ಮೊದಲ ವಾರದಲ್ಲಿ ಇನ್ನಷ್ಟು ಕಡಿಮೆಯಾಗಲಿದ್ದು, ಕನಿಷ್ಟ 10 ಡಿಗ್ರಿ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸುತ್ತಾರೆ‌.

ಕಳೆದ‌ ವರುಷ ಹೇಳಿಕೊಳ್ಳುವಷ್ಟು ಚಳಿಯಿದ್ದಿಲ್ಲ. ಆದರೆ ಈ ಬಾರಿ ಲ್ಯಾಬಿನೋ ಕಂಡೀಷನ್ ನಿಂದಾಗಿ ಅತಿ ಹೆಚ್ಚಿನ ಚಳಿಯಾಗುತ್ತಿದೆ. ಫೆಸಿಫಿಕ್ ಮಹಾಸಾಗರ ಮೇಲ್ಮೈ ನೀರು ತಂಪಾಗುವಿಕೆ ಪ್ರಮುಖ ಕಾರಣವಾಗಿದೆ.‌ ಉತ್ತರ ಹಾಗೂ ಈಶಾನ್ಯದಿಂದ ಬರುವ ಒಣಹವೆಯಿಂದಾಗಿ ಚಳಿ ಹೆಚ್ಚಾಗುತ್ತಿದೆ. ಡಿಸೆಂಬರ್ 21ರಿಂದ ಹಗಲಿನ ವೇಳೆ ಕಡಿಮೆಯಾಗಿ ರಾತ್ರಿ ವೇಳೆ ಹೆಚ್ಚಾಗುತ್ತಿದೆ. ಇದರಿಂದ ಕೂಲಿಂಗ್ ಹೆಚ್ಚಾಗಿ ಹೀಟ್ ಕಡಿಮೆಯಾಗುತ್ತದೆ. ಇದರಿಂದಾಗಿ ತಾಪಮಾನ ಕನಿಷ್ಠಕ್ಕಿಳಿಯುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ