Breaking News

ಪಿಡಿಓಎಸಿಬಿ ಅಧಿಕಾರಿಗಳ ಬಲೆಗೆ

Spread the love

ಶಿರಸಿ :    ಶಿರಸಿ  ತಾಲ್ಲೂಕಿನ ಕುಕ್ರಿ ಗ್ರಾಮದ ರೈತರರೊಬ್ಬರಿಂದ ಮನೆ ಸಂಖ್ಯೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಜಾನ್ಮನೆ ಗ್ರಾಮ ಪಂಚಾಯ್ತಿ ಪಿಡಿಓ ಕೃಷ್ಣಪ್ಪ ಯಲ್ವಗಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
      ಸುಧೀಂದ್ರ ಹೆಗಡೆ ಎಂಬುವವರು 2014ರಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅದಕ್ಕೆ ಸಂಖ್ಯೆ ನೀಡಲು ಪಿಡಿಓ ₹15 ಸಾವಿರ ಹಣದ ಬೇಡಿಕೆ ಇಟ್ಟಿದ್ದಾಗಿ ಸುಧೀಂದ್ರ ಎಸಿಬಿಗೆ ದೂರು ನೀಡಿದ್ದರು. ಶನಿವಾರ ಸುಧೀಂದ್ರ ಅವರು ಲಂಚ ನೀಡುವಾಗ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಪಿಡಿಓ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದರು.
       ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಯಿತು. ಪಿಡಿಓ ಮೇಲೆ ಈ ಹಿಂದೆಯೂ ಕೆಲ ದೂರು ಬಂದಿತ್ತು. ಈಗ ಸಾಕ್ಷಿ ಸಮೇತ ವಶಕ್ಕೆ ಪಡೆಯಲಾಯಿತು ಎಂದು ಶ್ರೀಕಾಂತ್ ತಿಳಿಸಿದರು.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ