Breaking News

ಕ್ರಿಸ್‍ಮಸ್ ಹಿನ್ನೆಲೆ ಕೇಕ್ ತಯಾರಿಕೆ ಜೋರಾಗೇ ನಡೆದಿದ್ದು, ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಕೇಕ್ ಮಿಕ್ಸಿಂಗ್

Spread the love

ಮೈಸೂರು: ಕ್ರಿಸ್‍ಮಸ್ ಹಿನ್ನೆಲೆ ಕೇಕ್ ತಯಾರಿಕೆ ಜೋರಾಗೇ ನಡೆದಿದ್ದು, ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಕೇಕ್ ಮಿಕ್ಸಿಂಗ್ ಮಾಡಿ ಗಮನ ಸೆಳೆದಿದ್ದಾರೆ.ದಾಸ ಶೆಫ್ ಆಗಿ ಕೇಕ್ ಮಿಕ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ದರ್ಶನ್‍ಗೆ ನಿರ್ಮಾಪಕ ಸಂದೇಶ್ ಸಾಥ್ ನೀಡಿದ್ದು, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜು ಭಾಗಿಯಾಗಿ ಕ್ರಿಸ್‍ಮಸ್ ಅಂಗವಾಗಿ ತಯಾರಾಗುತ್ತಿರುವ ಕೇಕ್ ತಯಾರಿಕೆಗೆ ಕೈ ಜೋಡಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತರರೊಂದಿಗೆ ಕ್ರಿಸ್‍ಮಸ್ ಸಂಭ್ರಮದಲ್ಲಿ ತೊಡಗಿ, ಕೇಕ್ ಮಿಕ್ಸಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ನೇಹಿತರ ಜೊತೆ ಕ್ರಿಸ್ ಮಸ್ ಹಬ್ಬದ ಕೇಕ್ ಮಿಕ್ಸಿಂಗ್ ಮಾಡಿ ಸಂಭ್ರಮಿಸಿದ್ದಾರೆ.

ಡಿಸೆಂಬರ್ 25ರಂದು ಕ್ರಿಸ್‍ಮಸ್ ಹಬ್ಬವಿದ್ದು, ಒಂದು ತಿಂಗಳ ಮುಂಚಿನಿಂದಲೇ ಕೇಕ್ ತಯಾರಿಸಲಾಗುತ್ತಿದೆ. ದರ್ಶನ್ ಸಹ ಕೇಕ್ ತಯಾರಿಸುವ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕ್ರಿಸ್‍ಮಸ್ ಅಂಗವಾಗಿ ವಿವಿಧ ಬಗೆಯ ಹಾಗೂ ಬೃಹತ್ ಕೇಕ್‍ಗಳನ್ನು ತಯಾರಿಸಲಾಗುತ್ತದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ