Breaking News

ಹುಬ್ಬಳ್ಳಿಯ ಹೊರವಲಯದ ಪ್ರದೇಶದಲ್ಲಿ ಅಂದರ್ ಬಾಹರ್ ಅಡುತ್ತಿದ್ದವರ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ದಾಳಿ

Spread the love

ಹುಬ್ಬಳ್ಳಿಯ ಹೊರವಲಯದ ಅಂಚಟಗೇರಿ ಗ್ರಾಮದ ಬಳಿ ಇರುವ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಅಡುತ್ತಿದ್ದವರ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ 60500 ನಗದು 11 ಮೊಬೈಲ್ ಫೋನ್ ಹಾಗೂ 5 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಒಟ್ಟು ನಾಲ್ಕು ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬಸವರಾಜ ದುರುಗಪ್ಪ ಗುಂಜಳ್ಳಿ,ಮಂಜುನಾಥ ಶುಭಾಸ್ ಹಿರೇಮಠ,ಯೇಸುದಾಸ ಡ್ಯಾನಿಯಲ್ ವಲಗುಂದಿ, ಅರ್ಜುನ ಪರಶುರಾಮ ಖಾಲಿಗಾಡಿ,ಉಮೇಶ ಪಕ್ಕಿರಪ್ಪ ಧರಣಿ, ವಿಶಾಲ್ ಸುರೇಶ ಹನುಮಸಾಗರ,ಕೃಷ್ಣಾ ರಾಮಸ್ ದಲಬಂಜನ್,ಚಂದನ ವಾಸುದೇವ ನಾಯಕ,ನೀಲಪ್ಪ ಮರಿಯಪ್ಪ ಭಗವತಿ,ಬಂಧಿತ ಆರೋಪಿಗಳಾಗಿದ್ದರೆ.

ಧಾರವಾಡ ಜಿಲ್ಲಾ ಪೋಲಿಸವರಿಷ್ಠಾಧಿಕಾರಿ ಕ್ರಷ್ಣಕಾಂತ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ, ಹಾಗೂ ಸಿಬ್ಬಂದಿಗಳಾದ ನಾರಾಯಣ ಹಿರಿಹೋಳಿ,ಎಂ ಎಫ್ ವಾಲೀಕರ್ ಭಾಗಿಯಾಗಿದ್ದರು.

 


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ