Breaking News

ಮೊದಲ ಬಾರಿಗೆ ಸುಮಾರು 800 ಶಿಶುಗಳ ತಿಂಗಳೊಂದರಲ್ಲೇ ಜನಿಸುವ ಮೂಲಕ ದಾಖಲೆ ನಿರ್ಮಿಸಿದೆ ಮಂಗಳೂರು: ಸರ್ಕಾರಿ ಆಸ್ಪತ್ರೆ

Spread the love

ಮಂಗಳೂರು: ಸರ್ಕಾರಿ ಆಸ್ಪತ್ರೆ ಅಂದ್ರೆ ಜನ ಮಾರುದ್ದ ಓಡ್ತಾರೆ. ಸರಿಯಾದ ಚಿಕಿತ್ಸೆ ಸಿಗೋದಿಲ್ಲ ಅನ್ನೋರೇ ಹೆಚ್ಚು. ಆದ್ರೆ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಖಾಸಗಿ ಆಸ್ಪತ್ರೆಗಿಂತ ಏನು ಕಡಿಮೆ ಇಲ್ಲ ಎನ್ನುವಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಕೊರೊನಾದ ಬಳಿಕ ಜನ ಈ ಆಸ್ಪತ್ರೆಯತ್ತ ಮುಗಿ ಬೀಳಲಾರಂಭಿಸಿದ್ದಾರೆ. ಈ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 800 ಶಿಶುಗಳ ತಿಂಗಳೊಂದರಲ್ಲೇ ಜನಿಸುವ ಮೂಲಕ ದಾಖಲೆ ನಿರ್ಮಿಸಿದೆ.

ಪ್ರತಿ ತಿಂಗಳು ಈ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ 400ರಿಂದ 450 ಮಕ್ಕಳ ಜನನವಾಗುತಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಸುಮಾರು 600 ಶಿಶುಗಳು ಜನಿಸಿದ್ದವು. ಆದರೆ ಅಕ್ಟೋಬರ್ ತಿಂಗಳಿನಲ್ಲಿ 800 ಅಸುಪಾಸು ಸಂಖ್ಯೆಯಲ್ಲಿ ಶಿಶುಗಳು ಜನಿಸಿದ್ದು ಮಾತ್ರ ವಿಶೇಷ. 800ರ ಗಡಿ ದಾಟಿರುವ ಈ ಹೆರಿಗೆಯಲ್ಲಿ 379 ಸಿಸೇರಿಯನ್ ಹೆರಿಗೆಯಾಗಿದ್ರೆ, ಇನ್ನುಳಿದ ಎಲ್ಲವೂ ನಾರ್ಮಲ್ ಡೆಲಿವರಿ ಎಂಬುದು ಇನ್ನೊಂದು ಗುಡ್ ನ್ಯೂಸ್. ಕೇವಲ ಒಂದೇ ತಿಂಗಳಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಶುಗಳ ಜನನವಾಗಿರುವುದು ಆಸ್ಪತ್ರೆಯ ಇತಿಹಾಸದಲ್ಲೇ ಇದೇ ಮೊದಲು.


Spread the love

About Laxminews 24x7

Check Also

ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್

Spread the loveಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ