Breaking News

ಶನಿವಾರ ವಿನಯ ಕುಲಕರ್ಣಿ ಜನ್ಮ ದಿನ. ಆದರೆ 3 ದಿನಗಳ ಕಾಲ ಸಿಬಿಐ ನಕಸ್ಟಡಿಗೆ

Spread the love

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಇಂದು ಜನ್ಮ ದಿನ. ಆದರೆ 3 ದಿನಗಳ ಕಾಲ ಅವರನ್ನು ಸಿಬಿಐ ನಕಸ್ಟಡಿಗೆ ನೀಡಿದ್ದರಿಂದ ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಜೈಲಿಗೆ ಆಗಮಿಸಿದ್ದಾರೆ.

ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲು ಹಿಂಡಲಗಾ ಜೈಲಿನಲ್ಲಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

ಗುರುವಾರ ಧಾರವಾಡದಲ್ಲಿ ವಿನಯ ಕುಲಕರ್ಣಿಯನ್ನು ಬಂಧಿಸಲಾಗಿದೆ. ಇಡೀ ದಿನ ವಿಚಾರಣೆ ಬಳಿಕ ಸಂಜೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಬಳಿಕ 3 ದಿನಗಳ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಶನಿವಾರ ವಿನಯ ಕುಲಕರ್ಣಿ ಜನ್ಮ ದಿನ. ಧಾರವಾಡದಲ್ಲಿ ಈ ಬಾರಿ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ನಡೆಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ನಗರದಲ್ಲಿ ಕಟೌಟ್, ಪೋಸ್ಟರ್ ಗಳನ್ನು ಹಾಕಲು ಸಿದ್ಧತೆ ಮಾಜಡಿಕೊಳ್ಳಲಾಗಿತ್ತು. ಆದರೆ ವಿಧಿಯ ಲೀಲೆೆಯೇ ಬೇರೆ. ಇಂದು ಅವರು ಜೈಲಿನಿಂದ ಸಿಬಿಐ ಕಸ್ಟಡಿಗೆ ಹೋಗುತ್ತಿದ್ದಾರೆ. ಸಿಬಿಐ 3 ದಿನಗಳ ಕಾಲ ಡ್ರಿಲ್ ಮಾಡಲಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ